ಕ್ರಿಕೆಟ್ ವೃತ್ತಿಜೀವನದಲ್ಲಿ ಅದ್ಭುತ ಫಾರ್ಮ್’ನಲ್ಲಿರುವ ರೋಹಿತ್ ವೃತ್ತಿಜೀವನದ 21ನೇ ಶತಕ ಸಿಡಿಸಿದರೆ, ರಾಯುಡು ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಒಂದು ಹಂತದಲ್ಲಿ ರೋಹಿತ್ ಇಂದೂ ಕೂಡಾ ದ್ವಿಶತಕ ಸಿಡಿಸಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು.
ಮುಂಬೈ[ಅ.29]: ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಹಾಗೂ ಅಂಬಟಿ ರಾಯುಡು ಬಾರಿಸಿದ ಭರ್ಜರಿ ಶತಕಗಳ ನೆರವಿನಿಂದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಎದುರು 377 ರನ್’ಗಳ ಬೃಹತ್ ಮೊತ್ತ ಕಲೆಹಾಕಿದ್ದು ಕೆರಿಬಿಯನ್ನರಿಗೆ ಕಠಿಣ ಸವಾಲು ನೀಡಿದೆ.
ಕ್ರಿಕೆಟ್ ವೃತ್ತಿಜೀವನದಲ್ಲಿ ಅದ್ಭುತ ಫಾರ್ಮ್’ನಲ್ಲಿರುವ ರೋಹಿತ್ ವೃತ್ತಿಜೀವನದ 21ನೇ ಶತಕ ಸಿಡಿಸಿದರೆ, ರಾಯುಡು ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು. ಒಂದು ಹಂತದಲ್ಲಿ ರೋಹಿತ್ ಇಂದೂ ಕೂಡಾ ದ್ವಿಶತಕ ಸಿಡಿಸಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಸೆಹ್ವಾಗ್ ಹೇಳುವಂತೆ ಒಂದುವೇಳೆ ರೋಹಿತ್ 50 ಓವರ್’ವರೆಗೂ ಕ್ರೀಸ್’ನಲ್ಲಿದ್ದರೆ ಏಕದಿನ ಕ್ರಿಕೆಟ್’ನಲ್ಲಿ ಹಿಟ್’ಮ್ಯಾನ್ 4ನೇ ಶತಕ ಸಿಡಿಸುತ್ತಿದ್ದರು ಎಂಬ ಮಾತು ಅತಿಶಯೋಕ್ತಿಯಲ್ಲ. ಈ ಮೊದಲು 2013ರಲ್ಲಿ ರೋಹಿತ್ ಆಸ್ಟ್ರೇಲಿಯಾ ವಿರುದ್ಧ 209, ಶ್ರೀಲಂಕಾ ಎದುರು 2014ರಲ್ಲಿ 264 ಹಾಗೂ ಮತ್ತೊಮ್ಮೆ ಶ್ರೀಲಂಕಾ ಎದುರು 2017ರಲ್ಲಿ 208* ರನ್ ಚಚ್ಚಿದ್ದರು.
ರೋಹಿತ್-ರಾಯುಡು ಶತಕಗಳ ಬಗ್ಗೆ ಟ್ವಿಟರಿಗರು ಏನಂದ್ರು ನೀವೇ ನೋಡಿ...
