Asianet Suvarna News Asianet Suvarna News

ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ!

ವೆಸ್ಟ್ಇಂಡೀಸ್ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿ ಪೈಕಿ ಆರಂಭಿಕ 2 ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಹಲವರಿಗೆ ವಿಶ್ರಾಂತಿ ನೀಡಿರುವ ಆಯ್ಕೆ ಸಮಿತಿ ಹೊಸಬರಿಗೆ ಅವಕಾಶ ನೀಡಿದೆ. ಇಲ್ಲಿದೆ ಆಯ್ಕೆಯಾಗಿರೋ ಟೀಂ ಇಂಡಿಯಾ ವಿವರ.

Cricket Team for first 2 ODIs against Windies announced
Author
Bengaluru, First Published Oct 11, 2018, 8:37 PM IST

ನವದೆಹಲಿ(ಅ.11) ವೆಸ್ಟ್ಇಂಡೀಸ್ ವಿರುದ್ದದ ಆರಂಭಿಕ 2 ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ  ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. 

ವಿಂಡೀಸ್ ವಿರುದ್ದದ ಆರಂಭಿಕ 2 ಏಕದಿನ ಪಂದ್ಯಕ್ಕೆ ಆಯ್ಕೆ ಮಾಡಿರೋ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆದಿದ್ದಾರೆ. ದಿನೇಶ್ ಕಾರ್ತಿಕ್‌ಗೆ ವಿಶ್ರಾಂತಿ ನೀಡಿದ್ದರೆ, ಇಂಜುರಿಯಾಗಿರೋ ಹಾರ್ಧಿಕ್ ಪಾಂಡ್ಯ ಬದಲು ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಗಮನಸೆಳೆದ ವೇಗಿ ಖಲೀಲ್ ಅಹಮ್ಮದ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ವೇಗದ ವಿಭಾಗದ ಸಾರಥ್ಯ ವಹಿಸಲಿದ್ದಾರೆ.

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಾಟಿ ರಾಯುಡು, ಮನೀಶ್ ಪಾಂಡೆ, ಕೆಎಲ್ ರಾಹುಲ್, ಎಂ.ಎಸ್ ಧೋನಿ, ರಿಷಬ್ ಪಂತ್, ರವೀಂದ್ರ ಜಡೇಜಾ, ಯುಜುವೇಂದ್ರ ಚೆಹಾಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹಮ್ಮದ್, ಶಾರ್ದೂಲ್ ಠಾಕೂರ್

Follow Us:
Download App:
  • android
  • ios