ಬೆಂಗಳೂರು(ಆ.14): ವಿಶ್ವ ಕ್ರಿಕೆಟ್‌ನಲ್ಲಿಆಗಸ್ಟ್ 14ಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲೂ ಈ ದಿನ ಭಾರತೀಯ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದ ದಿನ. ಇದೇ ದಿನದಿಂದ ಸಚಿನ್ ತೆಂಡೂಲ್ಕರ್ ಯುಗ ಆರಂಭಗೊಂಡಿತು.

17 ವರ್ಷ 112 ದಿನದ ಬಾಲಕ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದರು. ಒಲ್ಡ್ ಟ್ರೋಫೋರ್ಡ್ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ಬೌಲರ್‌ಗಳನ್ನ ಚೆಂಡಾಡಿದ ಸಚಿನ್ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು.

 

 

ಸಚಿನ್ ತೆಂಡೂಲ್ಕರ್ ಅಜೇಯ 119 ರನ್ ಸಿಡಿಸೋ ಮೂಲಕ ಪಂದ್ಯವನ್ನ ಡ್ರಾ ಮಾಡಿದರು. ಈ ಮೂಲಕ 17 ವರ್ಷದ ಬಾಲಕ ಇಂಗ್ಲೆಂಡ್ ಪಾಲಾಗುತ್ತಿದ್ದ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸುವಂತೆ ಮಾಡಿದ್ದರು.