ಕ್ರಿಕೆಟ್ ಸೀಕ್ರೇಟ್ಸ್: ಜೂನ್ 28: ಇಂದು ಇಬ್ಬರು ಪಾಕ್ ಕ್ರಿಕೆಟಿಗರ ಜನ್ಮದಿನ
ಬೆಂಗಳೂರು[ಜೂ.28]: ಸುವರ್ಣ ನ್ಯೂಸ್ ವೆಬ್’ಸೈಟ್ ’ಕ್ರಿಕೆಟ್ ಸೀಕ್ರೇಟ್ಸ್’ ಹೆಸರಿನಲ್ಲಿ ಕ್ರಿಕೆಟ್’ಗೆ ಸಂಬಂಧಿಸಿದ ರೋಚಕ ಹಾಗೂ ಕುತೂಹಲಕಾರಿ ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಆರಂಭಿಸಿದೆ. ಕ್ರಿಕೆಟ್ ಬಗೆಗಿನ ಸ್ವಾರಸ್ಯಕರ ಮತ್ತು ಇತಿಹಾಸದ ಘಟನೆಗಳನ್ನು ’ಸುವರ್ಣ ನ್ಯೂಸ್ ವೆಬ್ ಬಳಗ’ ಪ್ರತಿದಿನ ನಿಮ್ಮ ಮುಂದೆ ಮೆಲುಕು ಹಾಕಲಿದೆ...
ಜೂನ್ 28: ಇಂದು ಇಬ್ಬರು ಪಾಕ್ ಕ್ರಿಕೆಟಿಗರ ಜನ್ಮದಿನ
ಮುಷ್ತಾಕ್ ಅಹಮ್ಮದ್: ಜೂನ್ 28, 1970
ಪಾಕಿಸ್ತಾನ ಕ್ರಿಕೆಟ್ ತಂಡ ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಕ್ರಿಕೆಟಿಗರಲ್ಲು ಮುಷ್ತಾಕ್ ಅಹಮ್ಮದ್ ಕೂಡಾ ಒಬ್ಬರು. 1992ರ ವಿಶ್ವಕಪ್ ವಿಜೇತ ತಂಡದ ಬೌಲರ್ ಮುಷ್ತಾಕ್, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 346 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಖ್ಯಾತ ಲೆಗ್’ಸ್ಪಿನ್ನರ್’ಗಿಂದು 48ನೇ ಹುಟ್ಟುಹಬ್ಬದ ಸಂಭ್ರಮ.
ವಹಾಬ್ ರಿಯಾಜ್: ಜೂನ್ 28, 1985
ಪಾಕಿಸ್ತಾನದ ಸ್ಪೀಡ್’ಸ್ಟಾರ್ ವಹಾಬ್ ರಿಯಾಜ್’ಗಿಂದು 32ನೇ ಹುಟ್ಟುಹಬ್ಬದ ಸಂಭ್ರಮ. ಪ್ರತಿಗಂಟೆಗೆ 154 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ರಿಯಾಜ್ ಏಕದಿನ ಕ್ರಿಕೆಟ್’ನಲ್ಲಿ 102, ಟೆಸ್ಟ್’ನಲ್ಲಿ 83 ಹಾಗೂ ಟಿ20 ಕ್ರಿಕೆಟ್’ನಲ್ಲಿ 28 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.
