32 ವರ್ಷದ ಸನಾ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 7 ವಿಕೆಟ್ ಕಬಳಿಸುವುದರೊಂದಿಗೆ ಮೂರು ಸ್ಥಾನಗಳ ಏರಿಕೆ ಕಾಣುವುದರೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾ ಮಹಿಳಾ ತಂಡವು ಪಾಕಿಸ್ತಾನ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್’ಸ್ವೀಪ್ ಮಾಡಿಕೊಂಡಿದೆ.
ದುಬೈ[ಅ.26]: ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಐಸಿಸಿ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು, ಪಾಕಿಸ್ತಾನದ ವೇಗಿ ಸನಾ ಮೀರ್ ಏಕದಿನದಲ್ಲಿ ವಿಶ್ವ ನಂ.1 ಶ್ರೇಯಾಂಕಕ್ಕೇರಿದ್ದಾರೆ.
ಈ ಸಾಧನೆ ಮಾಡಿದ ಪಾಕಿಸ್ತಾನದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನು ಭಾರತದ ಅನುಭವಿ ಬೌಲರ್ ಜೂಲನ್ ಗೋಸ್ವಾಮಿ 5ನೇ ಸ್ಥಾನದಲ್ಲಿದ್ದಾರೆ.
ಪಾಕಿಸ್ತಾನ ತಂಡದ ಏಕದಿನ ಮತ್ತು ಟಿ20 ತಂಡದ ಮಾಜಿ ನಾಯಕಿಯೂ ಆಗಿರುವ ಸನಾ ಮೀರ್ ಇತ್ತೀಚೆಗೆ ನಡೆದ ಸರಣಿಗಳಲ್ಲಿ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದಾರೆ. ಹೀಗಾಗಿ ಅವರ ಶ್ರೇಯಾಂಕವೂ ಏರಿಕೆಯಾಗಿದೆ. ಸಾನಾ ಮೀರ್ 112 ಏಕದಿನ ಪಂದ್ಯದಿಂದ 136 ವಿಕೆಟ್ ಪಡೆದಿದ್ದಾರೆ.
32 ವರ್ಷದ ಸನಾ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 7 ವಿಕೆಟ್ ಕಬಳಿಸುವುದರೊಂದಿಗೆ ಮೂರು ಸ್ಥಾನಗಳ ಏರಿಕೆ ಕಾಣುವುದರೊಂದಿಗೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಆಸ್ಟ್ರೇಲಿಯಾ ಮಹಿಳಾ ತಂಡವು ಪಾಕಿಸ್ತಾನ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್’ಸ್ವೀಪ್ ಮಾಡಿಕೊಂಡಿದೆ.
ಕೆಲದಿನಗಳ ಹಿಂದಷ್ಟೇ ಸನಾ ಮೀರ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿದ್ದರು.