ಮುಂಬೈ[ಅ: ಐಪಿಎಲ್‌ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನ್ಯಾ.ಮುಕುಲ್‌ ಮುದ್ಗಲ್‌ ಸಮಿತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿರುವ 9 ಆಟಗಾರರ ಹೆಸರನ್ನು ಬಹಿರಂಗಪಡಿಸುವಂತೆ, ಬಿಸಿಸಿಐ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. 

ಭ್ರಷ್ಟಾಚಾರ ವಿರುದ್ಧ ಬಿಸಿಸಿಐ ಮತ್ತಷ್ಟು ಹೋರಾಟ ನಡೆಸಲು ಈ ಕ್ರಮ ಅಗತ್ಯ ಎಂದು ಸಿಒಎ ಹೇಳಿದೆ. ಮುಚ್ಚಿದ ಲಕೋಟೆಯಲ್ಲಿ ತನಿಖಾ ಸಮಿತಿ 13 ಮಂದಿಯ ಹೆಸರನ್ನು ತಿಳಿಸಿತ್ತು. 

ಈ ಪೈಕಿ ರಾಜಸ್ಥಾನ ತಂಡದ ಸಹ ಮಾಲೀಕ ರಾಜ್‌ ಕುಂದ್ರಾ, ಚೆನ್ನೈನ ಗುರುನಾಥ್‌ ಮೇಯಪ್ಪನ್‌, ಬಿಸಿಸಿಐ ಮಾಜಿ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಹಾಗೂ ಐಪಿಎಲ್‌ ಸಿಒಒ ಸುಂದರ್‌ ರಾಮನ್‌ ಹೆಸರು ಮಾತ್ರ ಹೊರಬಿತ್ತು. ಕುಂದ್ರಾ, ಮೇಯಪ್ಪನ್‌ ನಿಷೇಧ ಅನುಭವಿಸಿದರೆ, ಶ್ರೀನಿವಾಸನ್‌, ಸುಂದರ್‌ ಕ್ಲೀನ್‌ ಚಿಟ್‌ ಪಡೆದರು.