ಮಾಜಿ ಚಾಂಪಿಯನ್ ಕರ್ನಾಟಕ, 2018-19ರ ರಣಜಿ ಟ್ರೋಫಿ ಅಭಿಯಾನವನ್ನು ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ಆರಂಭಿಸಲಿದ್ದು, ರಾಜ್ಯದ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗಿದೆ.
ನಾಗ್ಪುರ[ನ.12]: ಮಾಜಿ ಚಾಂಪಿಯನ್ ಕರ್ನಾಟಕ, 2018-19ರ ರಣಜಿ ಟ್ರೋಫಿ ಅಭಿಯಾನವನ್ನು ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ಆರಂಭಿಸಲಿದ್ದು, ರಾಜ್ಯದ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಲಾಗಿದೆ.
ನಾಯಕನಾಗಿ ಮತ್ತೆ ವಿನಯ್ ಕುಮಾರ್ ಆರ್ ತಂಡವನ್ನು ಮುನ್ನಡೆಸಲಿದ್ದು, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್ ಅಗರ್’ವಾಲ್, ಕೆ. ಗೌತಮ್, ಟೀಂ ಇಂಡಿಯಾ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕೆ.ಎಲ್ ರಾಹುಲ್ ಅನುಪಸ್ಥಿತಿ ತಂಡವನ್ನು ಕಾಡಬಹುದು.
ಇದು ವಿನಯ್ ಕುಮಾರ್ ಪಾಲಿನ ನೂರನೇ ರಣಜಿ ಪಂದ್ಯವಾಗಿದ್ದು, ಸುನಿಲ್ ಜೋಶಿ, ಬ್ರಿಜೇಶ್ ಪಟೇಲ್ ಬಳಿಕ ಕರ್ನಾಟಕ ಪರ ನೂರು ರಣಜಿ ಪಂದ್ಯವನ್ನು ಪ್ರತಿನಿಧಿಸಿದ ಮೂರನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನರಾಗುತ್ತಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕರ್ನಾಟಕವನ್ನು ಸೆಮಿಫೈನಲ್ ಹಂತದಲ್ಲಿ ಮಣಿಸಿದ್ದ ವಿದರ್ಭ ಫೈನಲ್ ಪ್ರವೇಶಿಸಿ ಚಾಂಪಿಯನ್ ಆಗಿದ್ದು ಈಗ ಇತಿಹಾಸ.
ಹೀಗಿದೆ ಕರ್ನಾಟಕ ತಂಡ:
