19 ವರ್ಷದ ಮುಂಬೈನ ಯುವ ಪ್ರತಿಭೆ ಶಾ, ಡೀಪ್ ಮಿಡ್ ವಿಕೆಟ್ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಸ್ಟ್ರೇಲಿಯಾ XI ತಂಡದ ಆರಂಭಿಕ ಬ್ಯಾಟ್ಸ್’ಮನ್ ಮ್ಯಾಕ್ಸ್ ಬ್ರೆಯಾಂಟ್ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯುವ ಯತ್ನದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.
ಸಿಡ್ನಿ[ನ.30]: ಕ್ರಿಕೆಟ್ ಆಸ್ಟ್ರೇಲಿಯಾ ಇಲೆವನ್ ವಿರುದ್ಧ ಅಭ್ಯಾಸ ಪಂದ್ಯವಾಡುತ್ತಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದ್ದು, ಟೀಂ ಇಂಡಿಯಾ ಯುವ ಪ್ರತಿಭೆ ಪೃಥ್ವಿ ಶಾ ಎಡಗಾಲಿನ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದು, ಅಡಿಲೇಡ್ ಟೆಸ್ಟ್’ನಿಂದ ಹೊರಬಿದ್ದಿದ್ದಾರೆ.
ಪೃಥ್ವಿ ಶಾ ಮಾಸ್ಟರ್’ಬ್ಲಾಸ್ಟರ್ ತೆಂಡುಲ್ಕರ್’ರನ್ನು ಭೇಟಿ ಮಾಡಿದ್ದೇಕೆ..?
19 ವರ್ಷದ ಮುಂಬೈನ ಯುವ ಪ್ರತಿಭೆ ಶಾ, ಡೀಪ್ ಮಿಡ್ ವಿಕೆಟ್ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಸ್ಟ್ರೇಲಿಯಾ XI ತಂಡದ ಆರಂಭಿಕ ಬ್ಯಾಟ್ಸ್’ಮನ್ ಮ್ಯಾಕ್ಸ್ ಬ್ರೆಯಾಂಟ್ ಬಾರಿಸಿದ ಚೆಂಡನ್ನು ಕ್ಯಾಚ್ ಹಿಡಿಯುವ ಯತ್ನದಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಪೃಥ್ವಿ ಶಾ ಇದೇ ಅಭ್ಯಾಸ ಪಂದ್ಯದಲ್ಲಿ 66 ರನ್ ಸಿಡಿಸಿ ಗಮನ ಸೆಳೆದಿದ್ದರು.
ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಪೃಥ್ವಿ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು. ಇದೀಗ ಪೃಥ್ವಿ ಶಾ ಅನುಪಸ್ಥಿತಿ ಭಾರತಕ್ಕೆ ಅಲ್ಪ ಹಿನ್ನಡೆಯಾಗಬಹುದು. ಇದೀಗ ಕೆ.ಎಲ್ ರಾಹುಲ್ ಹಾಗೂ ಮುರುಳಿ ವಿಜಯ್ ಮೊದಲ ಟೆಸ್ಟ್’ನಲ್ಲಿ ಭಾರತ ಪರ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು 4 ಟೆಸ್ಟ್ ಪಂದ್ಯಗಳ ಸರಣಿ ಆಡಲಿದ್ದು, ಮೊದಲ ಪಂದ್ಯ ಡಿಸೆಂಬರ್ 06ರಂದು ಅಡಿಲೇಡ್’ನಲ್ಲಿ ನಡೆಯಲಿದೆ.
