ನ್ಯೂಜಿಲೆಂಡ್ ನೀಡಿದ್ದ 267 ರನ್’ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 8 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಅಂತಿಮವಾಗಿ 219 ರನ್’ಗಳಿಸಿ ಪಾಕಿಸ್ತಾನ ಸರ್ವಪತನ ಕಂಡು ಕಿವೀಸ್ ಎದುರು ಶರಣಾಯಿತು.
ಅಬುದಾಬಿ[ನ.08]: ನ್ಯೂಜಿಲೆಂಡ್ ವೇಗದ ಬೌಲರ್ ಪಾಕಿಸ್ತಾನದ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಡ್ಯಾನಿ ಮೋರಿಸ್ಸನ್ ಮತ್ತು ಶೇನ್ ಬಾಂಡ್ ಬಳಿಕ ಏಕದಿನ ಕ್ರಿಕೆಟ್’ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಕಿವೀಸ್ ತಂಡದ ಮೂರನೇ ಬೌಲರ್ ಎನ್ನುವ ಕೀರ್ತಿಗೆ ಬೌಲ್ಟ್ ಪಾತ್ರರಾಗಿದ್ದಾರೆ.
ಟಿ20 ಸರಣಿಯಿಂದ ಹೊರಗುಳಿದಿದ್ದ ಬೌಲ್ಟ್, ಪಂದ್ಯ ಮೂರನೇ ಓವರ್’ನ ಎರಡನೇ ಎಸೆತದಲ್ಲಿ ಪಾಕ್ ಆರಂಭಿಕ ಬ್ಯಾಟ್ಸ್’ಮನ್ ಫಖರ್ ಜಮಾನ್ ವಿಕೆಟ್ ಪಡೆದರು.
ಹೀಗಿತ್ತು ಆ ಕ್ಷಣ..
ಇದಾದ ಮರು ಎಸೆತದಲ್ಲಿ ಪಾಕಿಸ್ತಾನ ತಂಡದ ಆಪತ್ಭಾಂದವ ಎಂದೇ ಗುರುತಿಸಿಕೊಂಡಿರುವ ಬಾಬರ್ ಅಜಂ ಅವರನ್ನು ಬೌಲ್ಟ್ ಬಲಿ ಪಡೆದರು.
ಹೀಗಿತ್ತು ಆ ಕ್ಷಣ
ಮೂರನೇ ಎಸೆತದಲ್ಲಿ ಪಾಕಿಸ್ತಾನ ತಂಡದ ಅನುಭವಿ ಬ್ಯಾಟ್ಸ್’ಮನ್ ಮೊಹಮ್ಮದ್ ಹಫೀಜ್ ಎಲ್’ಬಿ ಬಲೆಗೆ ಬೀಳುವ ಮೂಲಕ ಬೌಲ್ಟ್ ಹ್ಯಾಟ್ರಿಕ್ ಸಾಧಿಸಲು ನೆರವಾದರು.
ಹೀಗಿತ್ತು ಆ ಕ್ಷಣ:
ನ್ಯೂಜಿಲೆಂಡ್ ನೀಡಿದ್ದ 267 ರನ್’ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 8 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಅಂತಿಮವಾಗಿ 219 ರನ್’ಗಳಿಸಿ ಪಾಕಿಸ್ತಾನ ಸರ್ವಪತನ ಕಂಡು ಕಿವೀಸ್ ಎದುರು ಶರಣಾಯಿತು.