Asianet Suvarna News Asianet Suvarna News

ಕೊಹ್ಲಿ ಕುರಿತ ಮುಂಬೈ ಪೊಲೀಸರ ಟ್ವೀಟ್ ಈಗ ವೈರಲ್..!

ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ ಗಾನವೇ ನಡೆಯುತ್ತಿದೆ. ಅನೇಕ ಹಿರಿಯ ಕ್ರಿಕೆಟಿಗರು, ಬಾಲಿವುಡ್ ನಟ, ನಟಿಯರಿಂದ ಹಿಡಿದು ಕ್ರೀಡಾಭಿಮಾನಿಗಳು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೊಹ್ಲಿ ಸಾಧನೆಯನ್ನು ಕಂಡು ‘ವಾಟ್ ಎ ಮ್ಯಾನ್‌‘ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Cricket Mumbai Police Tweet On Virat Kohli Record Goes Viral
Author
Mumbai, First Published Oct 26, 2018, 12:39 PM IST
  • Facebook
  • Twitter
  • Whatsapp

ನವದೆಹಲಿ[ಅ.26]: ಅತೀ ವೇಗವಾಗಿ 10 ಸಾವಿರ ರನ್ ದಾಖಲಿಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆ ಮುರಿದಿರುವ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

ಟ್ವೀಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ ಗಾನವೇ ನಡೆಯುತ್ತಿದೆ. ಅನೇಕ ಹಿರಿಯ ಕ್ರಿಕೆಟಿಗರು, ಬಾಲಿವುಡ್ ನಟ, ನಟಿಯರಿಂದ ಹಿಡಿದು ಕ್ರೀಡಾಭಿಮಾನಿಗಳು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೊಹ್ಲಿ ಸಾಧನೆಯನ್ನು ಕಂಡು ‘ವಾಟ್ ಎ ಮ್ಯಾನ್‌‘ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಓದಿ: ಅತಿವೇಗವಾಗಿ 10 ಸಾವಿರ ರನ್ ಪೂರೈಸಿದ ಕೊಹ್ಲಿ: ಟ್ವಿಟರಿಗರು ಫುಲ್ ಫಿದಾ..

ಮುಂಬೈ ಪೊಲೀಸ್ ಟ್ವೀಟ್ ವೈರಲ್: ‘ವೇಗಕ್ಕೆ ದಂಡವಿಲ್ಲ, ಪ್ರಶಂಸೆ ಮಾತ್ರ. ವಿರಾಟ್ ಕೊಹ್ಲಿ ಅವರೇ ನಿಮ್ಮ ಅದ್ಭುತ ಸಾಧನೆಗೆ ಶುಭಾಶಯಗಳು’ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರೀ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: ಕೊಹ್ಲಿ ಇರೋದೇ ತೆಂಡುಲ್ಕರ್ ದಾಖಲೆ ಮುರಿಯೋದಕ್ಕಾ..?

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 10,000 ರನ್ ಗಡಿ ದಾಟಿದ್ದಾರೆ. ಈ ಮಹಾನ್ ಸಾಧನೆ ಕೊಹ್ಲಿ 205 ಇನಿಂಗ್ಸ್ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡುಲ್ಕರ್ 259 ಇನಿಂಗ್ಸ್‌ನಲ್ಲಿ 10 ಸಾವಿರ ರನ್ ಗಡಿ ದಾಟಿರುವುದೇ ಸಾಧನೆಯಾಗಿತ್ತು.

Follow Us:
Download App:
  • android
  • ios