ತಮ್ಮನ್ನು ಭೇಟಿ ಮಾಡಲು ಬಂದ ಲಾರಾ ಕಂಡು ಸಚಿನ್‌ಗೆ ಅಚ್ಚರಿಯಾಗಿದೆ. ಈ ಕುರಿತು ಸ್ವತಃ ಸಚಿನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಇಬ್ಬರೂ ಒಟ್ಟಿಗೆ ತೆಗಿಸಿಕೊಂಡಿರುವ ಫೋಟೋವನ್ನು ಹಾಕಿದ್ದಾರೆ.
ಮುಂಬೈ[ಅ.20]: ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್‌ರ ನಿವಾಸಕ್ಕೆ ವೆಸ್ಟ್ ಇಂಡೀಸ್’ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ದಿಢೀರ್ ಭೇಟಿ ನೀಡಿದ್ದರು.
ತಮ್ಮನ್ನು ಭೇಟಿ ಮಾಡಲು ಬಂದ ಲಾರಾ ಕಂಡು ಸಚಿನ್‌ಗೆ ಅಚ್ಚರಿಯಾಗಿದೆ. ಈ ಕುರಿತು ಸ್ವತಃ ಸಚಿನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಇಬ್ಬರೂ ಒಟ್ಟಿಗೆ ತೆಗಿಸಿಕೊಂಡಿರುವ ಫೋಟೋವನ್ನು ಹಾಕಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಭಾರತ-ವಿಂಡೀಸ್ ಸರಣಿಗೆ ವೀಕ್ಷಕ ವಿವರಣೆ ನೀಡಲು ಲಾರಾ, ಭಾರತಕ್ಕೆ ಆಗಮಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ಇದೀಗ 5 ಪಂದ್ಯಗಳ ಏಕದಿನ ಸರಣಿಯಾಡಲಿದೆ. ಮೊದಲ ಏಕದಿನ ಪಂದ್ಯ ಅಕ್ಟೋಬರ್ 21ರಂದು ಗುವಾಹಟಿಯಲ್ಲಿ ನಡೆಯಲಿದೆ.
ಸಚಿನ್ ತೆಂಡುಲ್ಕರ್ ಭಾರತ ಪರ 200 ಟೆಸ್ಟ್ ಪಂದ್ಯಗಳನ್ನಾಡಿ 53ರ ಸರಾಸರಿಯಲ್ಲಿ 15,921 ರನ್ ಬಾರಿಸಿದ್ದರೆ, ಲಾರಾ 131 ಪಂದ್ಯಗಳಲ್ಲಿ 52.9ರ ಸರಾಸರಿಯಲ್ಲಿ 11,953 ರನ್ ಚಚ್ಚಿದ್ದಾರೆ.
