ಜಯದೇವ್ ಉನಾದ್ಕಟ್‌ಗೆ 8.4 ಕೋಟಿ ಹಾಗೂ ಅಕ್ಸರ್ ಪಟೇಲ್‍ಗೆ 5 ಕೋಟಿ ನೀಡಿ ರಾಜಸ್ಥಾನ ಹಾಗೂ ಡೆಲ್ಲಿ ತಂಡಗಳು ಖರೀದಿ ಮಾಡಿದ ಬೆನ್ನಲ್ಲೇ ಟ್ವಿಟರಿಗರ ಕಿವಿ ನೆಟ್ಟಗಾಗಿದೆ. ಹರಾಜಿನ ಬಳಿಕ ಟ್ವಿಟರಿಗರು ನೀಡಿದ ಅದ್ಬುತ ಪ್ರತಿಕ್ರಿಯೆ ಇಲ್ಲಿದೆ.
ಜೈಪುರ(ಡಿ.19): ಐಪಿಎಲ್ ಹರಾಜು ಟೀಂ ಇಂಡಿಯಾ ವೇಗಿ ಜಯದೇವ್ ಉನಾದ್ಕಟ್ ಹಾಗೂ ಸ್ಪಿನ್ನರ್ ಅಕ್ಸರ್ ಪಟೇಲ್ ಪಾಲಿಗೆ ಯಾವತ್ತೂ ಸಿಹಿಯನ್ನೇ ನೀಡಿದೆ. ಪ್ರತಿ ಹರಾಜಿನಲ್ಲಿ ಕೋಟಿ ಕೋಟಿಗೆ ಬಿಕರಿಯಾಗೋ ಮೂಲಕ ದಾಖಲೆ ಬರೆದಿದ್ದಾರೆ. ಇದಕ್ಕೆ ಜೈಪುರದಲ್ಲಿ ನಡೆದ 12ನೇ ಆವೃತ್ತಿ ಐಪಿಎಲ್ ಹರಾಜು ಕೂಡ ಹೊರತಾಗಿಲ್ಲ.
ಇದನ್ನೂ ಓದಿ:ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್-ಗರಂ ಆದ ಟೀಂ ಇಂಡಿಯಾ ಕ್ರಿಕೆಟಿಗ!
ಈ ಭಾರಿಯ ಹರಾಜಿನಲ್ಲಿ ಜಯದೇವ್ ಉನಾದ್ಕಟ್‌ಗೆ ಬರೋಬ್ಬರಿ 8.4 ಕೋಟಿ ರೂಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿತು. ಇದು ಈ ಬಾರಿಯ ಗರಿಷ್ಠ ಮೊತ್ತ ಕೂಡ ಹೌದು. ಇನ್ನು ಅಕ್ಸರ್ ಪಟೇಲ್ 5 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ. ಉನಾದ್ಕಟ್ ಹಾಗೂ ಅಕ್ಸರ್ ಪಟೇಲ್ ಹರಾಜಿಗೆ ಟ್ವಿಟರಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
