ಮೈಸೂರು[ಫೆ.15]: ಇಲ್ಲಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ಗುರುವಾರ ನಡೆದ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’, ಇಂಗ್ಲೆಂಡ್ ಲಯನ್ಸ್ ವಿರುದ್ಧ ಇನ್ನಿಂಗ್ಸ್ ಗೆಲುವಿನ ಲೆಕ್ಕಾಚಾರದಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆಯೊಂದಿಗೆ ಇಂಗ್ಲೆಂಡ್ ಲಯನ್ಸ್‌ಗೆ ಫಾಲೋ ಆನ್ ಹೇರಿದ ಭಾರತ ‘ಎ’ ದೊಡ್ಡ ಜಯದ ಉತ್ಸಾಹದಲ್ಲಿದೆ.

3 ವಿಕೆಟ್‌ಗೆ 282 ರನ್‌ಗಳಿಂದ ಮೊದಲ ಇನ್ನಿಂಗ್ಸ್ ಮಂದುವರೆಸಿದ ಭಾರತ ‘ಎ’ ತಂಡ 392 ರನ್ ಗಳಿಗೆ ಆಲೌಟ್ ಆಯಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಲಯನ್ಸ್‌ಗೆ ನವದೀಪ್ ಸೈನಿ (3-30) ಹಾಗೂ ಶಬಾಜ್ ನದೀಮ್ (3-32) ಕಂಟಕವಾದರು. ಲಯನ್ಸ್ ಪರ ಒಲಿ ಪೋಪ್ (25) ಗರಿಷ್ಠ ಸ್ಕೋರರ್ ಎನಿಸಿದರು. ಲಯನ್ಸ್ ಕೇವಲ 144 ರನ್‌ಗಳಿಗೆ ಆಲೌಟ್ ಆಯಿತು.

248 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಲಯನ್ಸ್ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 24 ರನ್ ಗಳಿಸಿದೆ. ಇನ್ನೂ ಲಯನ್ಸ್ 224 ರನ್‌ಗಳ ಹಿನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ ‘ಎ’ 392/10,
ಇಂಗ್ಲೆಂಡ್ ಲಯನ್ಸ್ 140/10 ಹಾಗೂ 24/0