ವೆಸ್ಟ್ ಇಂಡೀಸ್ ತಂಡದಿಂದ ಆ್ಯಂಡ್ರೆ ನರ್ಸ್ ಹಾಗೂ ಹೇಮ್’ರಾಜ್ ಚಂದ್ರಪಾಲ್ ಅವರನ್ನು ಕೈಬಿಟ್ಟು, ದೇವೇಂದ್ರ ಬಿಶೂ ಹಾಗೂ ಓಸಾನೆ ಥಾಮಸ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ತಿರುವನಂತಪುರಂ[ನ.01]: ಭಾರತ ವೆಸ್ಟ್ ಇಂಡೀಸ್ ವಿರುದ್ಧದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಆಯ್ದುಕೊಂಡಿದೆ. ವೆಸ್ಟ್ ಇಂಡೀಸ್ ತಂಡ ಎರಡು ಬದಲಾವಣೆಯೊಂದಿಗೆ ಕಣಕ್ಕಳಿದರೆ, ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

Add Asianetnews Kannada as a Preferred SourcegooglePreferred

ವೆಸ್ಟ್ ಇಂಡೀಸ್ ತಂಡದಿಂದ ಆ್ಯಂಡ್ರೆ ನರ್ಸ್ ಹಾಗೂ ಹೇಮ್’ರಾಜ್ ಚಂದ್ರಪಾಲ್ ಅವರನ್ನು ಕೈಬಿಟ್ಟು, ದೇವೇಂದ್ರ ಬಿಶೂ ಹಾಗೂ ಓಸಾನೆ ಥಾಮಸ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಈಗಾಗಲೇ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಇಂದಿನ ಪಂದ್ಯವನ್ನು ಜಯಿಸುವುದರೊಂದಿಗೆ ವಿರಾಟ್ ಪಡೆ ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾದಲ್ಲಿದ್ದರೆ, ವೆಸ್ಟ್ ಇಂಡೀಸ್ ತಂಡ ಈ ಪಂದ್ಯವನ್ನು ಗೆದ್ದು ಸರಣಿ ಸಮ ಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. 

ಈ ಏಕದಿನ ಪಂದ್ಯದ ಬಳಿಕ ಸುಮಾರು ಎರಡು ತಿಂಗಳುಗಳ ಕಾಲ ಟೀಂ ಇಂಡಿಯಾ ಏಕದಿನ ಸರಣಿ ಆಡುತ್ತಿಲ್ಲ. ಇದಾದ ನಂತರ ಜನವರಿ 12ರಂದು ಭಾರತ ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ಆಡಲಿದೆ.

ತಂಡಗಳು ಹೀಗಿವೆ:

ಭಾರತ:

Scroll to load tweet…

ವೆಸ್ಟ್ ಇಂಡೀಸ್:

Scroll to load tweet…