Asianet Suvarna News Asianet Suvarna News

ರೋಹಿತ್-ರಾಯುಡು ಭರ್ಜರಿ ಶತಕ: ವಿಂಡೀಸ್’ಗೆ ಕಠಿಣ ಗುರಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಧವನ್-ರೋಹಿತ್ ಜೋಡಿ ಮೊದಲ ವಿಕೆಟ್’ಗೆ 71 ರನ್’ಗಳ ಭರ್ಜರಿ ಜತೆಯಾಟವಾಡಿತು. ಈ ಜೋಡಿ 3,920+ ರನ್ ಕಲೆಹಾಕುವ ಮೂಲಕ ಭಾರತ ಪರ ಗರಿಷ್ಠ ರನ್ ಕಲೆಹಾಕಿದ ಎರಡನೇ ಆರಂಭಿಕ ಜೋಡಿ ಎನ್ನುವ ಕೀರ್ತಿಗೆ ಪಾತ್ರರಾದರು. ಈ ಮೂಲಕ ಸಚಿನ್-ಸೆಹ್ವಾಗ್[3,919] ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು.

Cricket Ind Vs WI Rohit, Rayudu tons power India to 377 for 5
Author
Mumbai, First Published Oct 29, 2018, 5:40 PM IST

ಮುಂಬೈ[ಅ.29] ರೋಹಿತ್ ಶರ್ಮಾ, ಅಂಬಟಿ ರಾಯುಡು ಬಾರಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 377 ರನ್ ಕಲೆಹಾಕಿದ್ದು ವೆಸ್ಟ್ ಇಂಡೀಸ್ ತಂಡಕ್ಕೆ ಕಠಿಣ ಗುರಿ ನೀಡಿದೆ.

ಮುಂಬೈನ ಬಾರ್ಬೋರ್ನ್ಸ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ಧವನ್-ರೋಹಿತ್ ಜೋಡಿ ಮೊದಲ ವಿಕೆಟ್’ಗೆ 71 ರನ್’ಗಳ ಭರ್ಜರಿ ಜತೆಯಾಟವಾಡಿತು. ಈ ಜೋಡಿ 3,920+ ರನ್ ಕಲೆಹಾಕುವ ಮೂಲಕ ಭಾರತ ಪರ ಗರಿಷ್ಠ ರನ್ ಕಲೆಹಾಕಿದ ಎರಡನೇ ಆರಂಭಿಕ ಜೋಡಿ ಎನ್ನುವ ಕೀರ್ತಿಗೆ ಪಾತ್ರರಾದರು. ಈ ಮೂಲಕ ಸಚಿನ್-ಸೆಹ್ವಾಗ್[3,919] ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದರು.

2 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನೊಂದಿಗೆ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ಧವನ್ 38 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲೇ ವಿರಾಟ್ ಕೊಹ್ಲಿ[16] ಕೂಡಾ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ರೋಹಿತ್ ಶರ್ಮಾ-ಅಂಬಟಿ ರಾಯುಡು ವಿಂಡೀಸ್ ಪಡೆಯನ್ನು ಮನಬಂದಂತೆ ದಂಡಿಸಿದರು.
ಕೆರಿಬಿಯನ್ನರನ್ನು ಕಾಡಿದ ಶರ್ಮಾ-ರಾಯುಡು ಜೋಡಿ:

ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುವಾಗ ಭಾರತ 101 ಗಳಿಸಿತ್ತು. ಈ ವೇಳೆ 3ನೇ ವಿಕೆಟ್’ಗೆ ಜತೆಯಾದ ಅಂಬಟಿ ರಾಯುಡು- ರೋಹಿತ್ ಶರ್ಮಾ ಜೋಡಿ ವಿಂಡೀಸ್ ಬೌಲರ್’ಗಳ ಮೇಲೆ ಸವಾರಿ ನಡೆಸಿದರು. ಆರಂಭದಲ್ಲಿ ಎಚ್ಚರಿಕೆಯ ಜತೆಯಾಟವಾಡಿದ ಈ ಜೋಡಿ ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಾ ಸಾಗಿತು. ರೋಹಿತ್ ವೃತ್ತಿ ಜೀವನದ 21ನೇ ಶತಕ ಸಿಡಿಸಿ ಮಿಂಚಿದರು. 97 ಎಸೆತಗಳಲ್ಲಿ ಶತಕ ಪೂರೈಸಿದ ರೋಹಿತ್ ಆಬಳಿಕ ಸ್ಫೋಟಕ ಆಟಕ್ಕೆ ಒತ್ತು ನೀಡಿದರು. ಈ ಜೋಡಿ ಮೂರನೇ ವಿಕೆಟ್’ಗೆ 211 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸಿದರು. ರೋಹಿತ್ ಒಂದು ಹಂತದಲ್ಲಿ ಇನ್ನೊಂದು ದ್ವಿಶತಕ ಸಿಡಿಸಬಹುದೇನೋ ಎಂದು ನಿರೀಕ್ಷಿಸಲಾಗಿತ್ತು. ಆ್ಯಂಡ್ರೆ ನರ್ಸ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್[162] ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ರೋಹಿತ್ ವಿಕೆಟ್ ಪತನದ ನಂತರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಅಂಬಟಿ ರಾಯುಡು ವೃತ್ತಿಜೀವನದ ಮೂರನೇ ಶತಕ ಸಿಡಿಸಿದರು. ಈ ಮೂಲಕ ನಾಲ್ಕನೇ ಕ್ರಮಾಂಕಕ್ಕೆ ತಾನು ಫಿಟ್ ಇರುವುದಾಗಿ ಮತ್ತೊಮ್ಮೆ ಸಾಬೀತು ಮಾಡಿದರು. ರಾಯುಡು ಕೇವಲ 81 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ 100 ಬಾರಿಸಿ ರನೌಟ್ ಆದರು.
ಕೊನೆಯಲ್ಲಿ ಧೋನಿ[22], ಕೇದಾರ್ ಜಾದವ್ 16 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 370ರ ಗಡಿ ದಾಟಿಸಿದರು. 

ಸಂಕ್ಷಿಪ್ತ ಸ್ಕೋರ್:

ಭಾರತ: 377/5

ರೋಹಿತ್ ಶರ್ಮಾ: 162

ಅಂಬಟಿ ರಾಯುಡು: 100

ಕೀಮರ್ ರೋಚ್: 74/2

[* ವಿವರ ಅಪೂರ್ಣ] 

Follow Us:
Download App:
  • android
  • ios