ಪಾಕ್ ಬ್ಯಾಟ್ಸ್’ಮನ್ ಅಜಲ್ ಅಲಿ 64 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಹಾಸ್ಯಾತ್ಮಕವಾಗಿ ರನೌಟ್ ಆಗಿದ್ದಾರೆ. ಪೀಟರ್ ಸಿಡ್ಲ್ ಬೌಲಿಂಗ್’ನಲ್ಲಿ ಗಲ್ಲಿಯತ್ತ ಬಾರಿಸಿದ ಅಜರ್ ಬೌಂಡರಿ ಎಂದೇ ಭಾವಿಸಿ ಕ್ರೀಸ್ ಮಧ್ಯದಲ್ಲಿ ನಾನ್’ಸ್ಟ್ರೈಕರ್ ತುದಿಯಲ್ಲಿದ್ದ ಶಫಿಕ್ ಜತೆ ಮಾತನಾಡುತ್ತಾ ನಿಂತಿರುತ್ತಾರೆ.
ದುಬೈ[ಅ.19]: ಪಾಕಿಸ್ತಾನದ ಅಜರ್ ಅಲಿ ವಿಚಿತ್ರವಾಗಿ ರನೌಟ್ ಆದ ಕ್ಷಣವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
ಪಾಕ್ ಬ್ಯಾಟ್ಸ್’ಮನ್ ಅಜಲ್ ಅಲಿ 64 ರನ್ ಬಾರಿಸಿ ಬ್ಯಾಟಿಂಗ್ ನಡೆಸುತ್ತಿದ್ದಾಗ ಹಾಸ್ಯಾತ್ಮಕವಾಗಿ ರನೌಟ್ ಆಗಿದ್ದಾರೆ. ಪೀಟರ್ ಸಿಡ್ಲ್ ಬೌಲಿಂಗ್’ನಲ್ಲಿ ಗಲ್ಲಿಯತ್ತ ಬಾರಿಸಿದ ಅಜರ್ ಬೌಂಡರಿ ಎಂದೇ ಭಾವಿಸಿ ಕ್ರೀಸ್ ಮಧ್ಯದಲ್ಲಿ ನಾನ್’ಸ್ಟ್ರೈಕರ್ ತುದಿಯಲ್ಲಿದ್ದ ಶಫಿಕ್ ಜತೆ ಮಾತನಾಡುತ್ತಾ ನಿಂತಿರುತ್ತಾರೆ. ಆದರೆ ವೇಗಿ ಮಿಚೆಲ್ ಸ್ಟಾರ್ಕ್ ಚೆಂಡನ್ನು ಹಿಡಿದು ವಿಕೆಟ್ ಕೀಪರ್ ಪೈನ್’ಗೆ ಎಸೆಯುತ್ತಾರೆ. ನಾಯಕ ಪೈನ್ ತಡಮಾಡದೇ ವಿಕೆಟ್ ಎಗರಿಸುವ ಮೂಲಕ ಪಾಕ್ ಬ್ಯಾಟ್ಸ್’ಮನ್’ಗೆ ಶಾಕ್ ನೀಡುತ್ತಾರೆ. ಅಂಪೈರ್’ಗಳು ದೀರ್ಘ ಸಮಾಲೋಚನೆಯ ಬಳಿಕ ಅಜರ್ ಅಲಿ ಅವರನ್ನು ರನೌಟ್ ಎಂದು ತೀರ್ಪು ನೀಡುತ್ತಾರೆ.
ಹೀಗಿತ್ತು ಆ ಕ್ಷಣ...
2 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇದೀಗ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಪಾಕಿಸ್ತಾನ ಮೊದಲ ಇನ್ನಿಂಗ್ಸ್’ನಲ್ಲಿ 282 ಹಾಗೂ ಎರಡನೇ ಇನ್ನಿಂಗ್ಸ್’ನಲ್ಲಿ 400 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 12 ಓವರ್’ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 47 ರನ್ ಬಾರಿಸಿದ್ದು ಇನ್ನೂ ಗೆಲ್ಲಲು 491 ರನ್ ಗಳಿಸಬೇಕಿದೆ.
