ಕ್ರಿಕೆಟ್ ಆಸ್ಟ್ರೇಲಿಯಾ, ಆಟಗಾರರ ಸಂಘದ ಮುಂದೆ ಪರಿಷ್ಕೃತ ಪ್ರಸ್ತಾಪವನ್ನಿಟ್ಟಿದ್ದರೂ ಆಟಗಾರರು ಅದಕ್ಕೂ ಒಪ್ಪಿಗೆ ಸೂಚಿಸಿರಲಿಲ್ಲ.

ಸಿಡ್ನಿ(ಜೂ.29): ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಹಾಗೂ ಕ್ರಿಕೆಟಿಗರ ನಡುವಿನ ವೇತನ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗಿದ್ದು, ನಿಗದಿತ ಗಡಿಯೊಳಗೆ ನೂತನ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ನಿರುದ್ಯೋಗಿಗಳಾಗಬೇಕಾಗುತ್ತದೆ ಎಂದು ತನ್ನ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಪತ್ರದ ಮೂಲಕ ಎಚ್ಚರಿಕೆ ನೀಡಿದೆ.

ಶುಕ್ರವಾರ (ಜೂ.30)ಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರರ ಒಪ್ಪಂದದ ಅವಧಿ ಮುಕ್ತಾಯಗೊಳ್ಳಲಿದೆ.

200ಕ್ಕೂ ಹೆಚ್ಚಿನ ಆಟಗಾರರು ಒಪ್ಪಂದದಿಂದ ಹೊರಬರುವ ಸಾಧ್ಯತೆ ಇದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮಹತ್ವದ ಪಂದ್ಯಾವಳಿಗಳಿಗೂ ಗೈರಾಗುವುದಾಗಿ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಸೇರಿದಂತೆ ಹಲವರು ಬೆದರಿಕೆ ಹಾಕಿದ್ದರು.

ಕ್ರಿಕೆಟ್ ಆಸ್ಟ್ರೇಲಿಯಾ, ಆಟಗಾರರ ಸಂಘದ ಮುಂದೆ ಪರಿಷ್ಕೃತ ಪ್ರಸ್ತಾಪವನ್ನಿಟ್ಟಿದ್ದರೂ ಆಟಗಾರರು ಅದಕ್ಕೂ ಒಪ್ಪಿಗೆ ಸೂಚಿಸಿರಲಿಲ್ಲ.