ಮುಂಬೈ(ಆ.16):  ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಪುನರ್ ಆಯ್ಕೆಯಾಗಿದ್ದಾರೆ.  ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿ ಸಂದರ್ಶನದ ಮೂಲಕ ಟೀಂ ಇಂಡಿಯಾ ಮುಖ್ಯ ಕೋಚ್ ಆಯ್ಕೆ ಮಾಡಿತು. ರವಿ ಶಾಸ್ತ್ರಿ, ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಮೈಕ್ ಹೆಸನ್ ಹಾಗೂ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿ ಟಾಮ್ ಮೂಡಿ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತು. 

ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಪಿಲ್ ದೇವ್ ನೇತೃತ್ವದ ಸಲಾಹ ಸಮಿತಿ ಕೋಚ್ ಆಯ್ಕೆ ಬಹಿರಂಗ ಪಡಿಸಿತು. ಸಲಹಾ ಸಮಿತಿಯ ಮೊದಲ ಆಯ್ಕೆ ರವಿ ಶಾಸ್ತ್ರಿ, ಎರಡನೇ ಆಯ್ಕೆ ಮೈಕ್ ಹೆಸನ್ ಹಾಗೂ ಮೂರನೇ ಆಯ್ಕೆ ಟಾಮ್ ಮೂಡಿ ಎಂದು ಕಪಿಲ್ ಹೇಳಿದರು. ಕ್ರಿಕೆಟ್ ಸಲಹಾ ಸಮಿತಿ ಕೋಚ್ ಆಯ್ಕೆ ವರದಿಯನ್ನು ಬಿಸಿಸಿಐಗೆ ಕಳುಹಿಸಿದೆ ಎಂದು  ಕಪಿಲ್ ಹೇಳಿದರು.

 

 ಟೀಂ ಇಂಡಿಯಾ ಕೋಚ್ ಹುದ್ದೆಗೆ 2000ಕ್ಕೂ ಹೆಚ್ಚು ಅರ್ಜಿಗಳು ಬಿಸಿಸಿಐ ಕಚೇರಿ ತಲುಪಿತ್ತು. ಇದರಲ್ಲಿ 6 ಮಂದಿಯನ್ನು ಅಂತಿಮಗೊಳಿಸಿ ಸಂದರ್ಶನಕ್ಕೆ ಕರೆಯಲಾಗಿತ್ತು. ಸಂದರ್ಶನಕ್ಕೂ ಮುನ್ನ ಆಫ್ಘಾನಿಸ್ತಾನ ಮಾಜಿ ಕೋಚ್ ಫಿಲ್ ಸಿಮೋನ್ಸ್  ಕೋಚ್ ರೇಸ್‌ನಿಂದ ಹಿಂದೆ ಸರಿದಿದ್ದರು.  ಹೀಗಾಗಿ ಐವರನ್ನು ಸಂದರ್ಶನ ನಡೆಸಿ ಕೋಚ್ ಆಯ್ಕೆ ಮಾಡಲಾಗಿದೆ. 

ಕಪಿಲ್ ದೇವ್ ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತ ರಂಗಸ್ವಾಮಿ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಅಳೆದು ತೂಗಿ ಕೋಚ್ ಆಯ್ಕೆ ಮಾಡಿದೆ.