ಇಷ್ಟು ದಿನ ಬೌಂಡರಿ-ಸಿಕ್ಸರ್​​​ ಅಂತಿದ್ದ ಭಾರತೀಯ ಕ್ರೀಡಾಭಿಮಾನಿಗಳು ಇನ್ನು  ಮುಂದೆ ಕಬ್ಬಡಿ-ಕಬ್ಬಡಿ ಅಂತ ಚಿರಾಡುವ ಸಮಯ ಬಂದಿದೆ. ಇಂದಿನಿಂದ ಮೂರು ತಿಂಗಳುಗಳ ಕಾಲ ಪ್ರತೀ ರಾತ್ರಿ ನಿಮಗೆ ದೇಶಿ ಕ್ರೀಡೆ ಕಬ್ಬಡಿ ಕಿಕ್​ ಏರಿಸಲು ಪ್ರೊ ಕಬ್ಬಡಿ ಲೀಗ್​​ ಶುರುವಾಗ್ತಿದೆ. ಈ ಲೀಗ್​​​ ಹೇಗೇ ನಡಿಯುತ್ತೆ..? ಎಲ್ಲಿ ನಡೆಯುತ್ತೆ.? ಯಾವ ಯಾವ ತಂಡಗಳು ಇರುತ್ವೆ ಎನ್ನುವ ಪ್ರಶ್ನೆಗಳಿಗೆಲ್ಲಾ ಇಲ್ಲಿದೆ ಉತ್ತರ.

ನವದೆಹಲಿ(ಜು.28): ಇಷ್ಟು ದಿನ ಬೌಂಡರಿ-ಸಿಕ್ಸರ್​​​ ಅಂತಿದ್ದ ಭಾರತೀಯ ಕ್ರೀಡಾಭಿಮಾನಿಗಳು ಇನ್ನು ಮುಂದೆ ಕಬ್ಬಡಿ-ಕಬ್ಬಡಿ ಅಂತ ಚಿರಾಡುವ ಸಮಯ ಬಂದಿದೆ. ಇಂದಿನಿಂದ ಮೂರು ತಿಂಗಳುಗಳ ಕಾಲ ಪ್ರತೀ ರಾತ್ರಿ ನಿಮಗೆ ದೇಶಿ ಕ್ರೀಡೆ ಕಬ್ಬಡಿ ಕಿಕ್​ ಏರಿಸಲು ಪ್ರೊ ಕಬ್ಬಡಿ ಲೀಗ್​​ ಶುರುವಾಗ್ತಿದೆ. ಈ ಲೀಗ್​​​ ಹೇಗೇ ನಡಿಯುತ್ತೆ..? ಎಲ್ಲಿ ನಡೆಯುತ್ತೆ.? ಯಾವ ಯಾವ ತಂಡಗಳು ಇರುತ್ವೆ ಎನ್ನುವ ಪ್ರಶ್ನೆಗಳಿಗೆಲ್ಲಾ ಇಲ್ಲಿದೆ ಉತ್ತರ.

ಇಂದಿನಿಂದ ಅಸಲಿ ಆಟ ಶುರು ಇಂತಹ ಒಂದು ಟ್ಯಾಗ್ ಲೈನ್​​ ಇಟ್ಟುಕೊಂಡು ಬರುತ್ತಿಡುವ ಹೋಸ ಲೀಗ್​​​ ಪ್ರೊ ಕಬಡ್ಡಿ. ಇಷ್ಟು ದಿನಗಳ ಕಾಲ ಕ್ರಿಕೆಟ್​​​ನಲ್ಲಿ ಮುಳುಗಿ ಹೋಗಿದ್ದ ಕ್ರೀಡಾಭಿಮಾನಿಗಳು ಇನ್ನೂ ಮೂರು ತಿಂಗಳು ನಮ್ಮದೇ ದೇಶಿಯ ಕ್ರೀಡೆಯಾದ ಕಬಡ್ಡಿಯನ್ನ ಸವೆಯಲು ರೆಡಿಯಾಗಬೇಕಿದೆ. ಆಟಗಾರರು ತೊಡೆತಟ್ಟಿ ನಿಲ್ಲೋದನ್ನ ನೋಡೋಕೆ ಸಿದ್ಧರಾಗಬೇಕಿದೆ.

ಕಣ್ಮನ ಸೆಳೆಯುತ್ತಿವೆ ವಿಭಿನ್ನ ಪ್ರೋಮೋಗಳು

ಇಂದಿನಿಂದ ನಡೆಯುವ ಈ ಲೀಗ್​ನ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್​​​ ಸಂಸ್ಥೆ ಈಗಾಗಲೇ ತಮ್ಮ ಅದ್ಭುತ ಪ್ರೋಮೋಗಳಿಂದ ಪ್ರೇಕ್ಷಕರ ಗಮನ ಸೆಳದಿದೆ. ಚಿತ್ರ ವಿಚಿತ್ರ ಪ್ರೋಮೋಗಳು ಎಲ್ಲರನ್ನ ರಂಜಿಸುತ್ತಿದೆ. ಅದರಲ್ಲೂ ಚೋಟ ಭೀಮ್​​​​ ಅವತರಿಕೆಯ ಪ್ರೋಮೋ ಚಿಕ್ಕ ಮಕ್ಕಳನ್ನೂ ಕಬಡ್ಡಿಯತ್ತ ಸೆಳಿತಿದೆ.

ಇನ್ನೂ ಆಯ ಫ್ರ್ಯಾಂಚೈಸಿಗಳೂ ತಮ್ಮದೇ ತಂಡದ ಪ್ರೋಮೋಗಳನ್ನ ಮಾಡಿ ತಮ್ಮ ಅಭಿಮಾನಿಗಳಿಗೆ ಕಿಕ್​​ ನೀಡ್ತಿವೆ. ಅದರಲ್ಲೂ ನಮ್ಮ ಬೆಂಗಳೂರು ಬುಲ್ಸ್​​​ನ ಪ್ರೋಮೋದಲ್ಲಿ ಸ್ಯಾಂಡಲ್​ವುಡ್​​​ ಸ್ಟಾರ್​​​ ಯಶ್​​ ಹಾಡಿ ಕುಣಿದಿರೋದು ಎಲ್ಲರನ್ನ ಸೆಳಿತಿದೆ.

ಇನ್ನೇನು ಕೆಲವೇ ಗಂಟೆಗಳು, ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್​​ ಆರಂಭವಾಗೋದಕ್ಕೆ. ಇಂದು ಅಸಲಿ ಆಟ ಶುರುವಾದ್ರೆ ಇನ್ನೂ 3 ತಿಂಗಳು ಅಂದ್ರೆ ಅಕ್ಟೋಬರ್​​​ 28ರವರೆಗೆ ಬಿಡುವಿಲ್ಲದೇ ಪಂದ್ಯಗಳು ನಡೆಯುತ್ತಲೇ ಇರುತ್ವೆ. ಒಟ್ಟಾರೆಯಾಗಿ 138 ಪಂದ್ಯಗಳು ಲೀಗ್​​ನಲ್ಲಿ ಸ್ಕೆಡ್ಯೂಲ್​​​ ಆಗಿದೆ. ಕಳೆದ 4 ಸೀಸನ್​​​ಗಳಲ್ಲಿ ಇದ್ದ 8 ತಂಡಗಳ ಜೊತೆಗೆ ಹೊಸದಾಗಿ 4 ತಂಡಗಳು ಸೇರಿಕೊಂಡಿವೆ. ಅಂದ್ರೆ ಒಟ್ಟು 12 ತಂಡಗಳು ಈ ಬಾರಿ ನಿಮ್ಮನ್ನ ರಂಜಿಸಲು ರೆಡಿಯಾಗಿದ್ದಾರೆ.

ಟೂರ್ನಿಯಲ್ಲಿ ಪಾಲ್ಗೊಳ್ಳೋ 12 ತಂಡಗಳು 2 ಜೋನ್​ಗಳಾಗಿ ವಿಂಗಡಿಸಲಾಗಿದೆ. A ಜೋನ್​ನಲ್ಲಿ ದಬಾಂಗ್​​ ಡೆಲ್ಲಿ, ಜೈಪುರ್​​​ ಪಿಂಕ್​​ ಪ್ಯಾಂಥರ್ಸ್​​​, ಪುಣೇರಿ ಪಲ್ಟಾನ್​​​, ಯೂ ಮುಂಬಾ, ಹರಿಯಾಣ ಸ್ಟೀಲರ್ಸ್​​​​ ಮತ್ತು ಗುಜರಾತ್​​​ ಫೋರ್ಚ್ಯೂನ್​​ ಜೇಂಟ್ಸ್​​​ ತಂಡಗಳಿದ್ರೆ. ‘ಬಿ’ ಜೋನ್​​ನಲ್ಲಿ ಬೆಂಗಳೂರು ಬುಲ್ಸ್​​​, ತೆಲುಗು ಟೈಟನ್ಸ್​​​, ಪಾಟ್ನಾ ಪೈರೇಟ್ಸ್​​​​, ಬೆಂಗಾಲ್​​ ವಾರಿಯರ್ಸ್​​​​​​​, ಯುಪಿ ಯೋಧಾಸ್​​​, ತಮಿಳು ತಲೈವಾಸ್​​​ ತಂಡಗಳಿವೆ.

ಪ್ರತೀ ಜೋನ್​​ನ ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ತಂಡಗಳು ಪ್ಲೇ ಆಫ್​​ಗೆ ಎಂಟ್ರಿ ಪಡೆಯಲಿವೆ. ನಂತರ ಕ್ವಾಲಿಫೈರ್​​ ಮತ್ತು ಎಲಿಮಿನೇಟರ್​​​ ಪಂದ್ಯಗಳಲ್ಲಿ ಕಾದಾಡಿ ಜಯರಾದ ಎರಡು ತಂಡಗಳು ಫೈನಲ್​ಗೇರಲಿವೆ.

ಚಾಂಪಿಯನ್ ತಂಡಕ್ಕೆ ಸಿಗಲಿದೆ ಬಂಪರ್​​​​..!

ಮೂರು ತಿಂಗಳ ಕಾಲ ಕಾದಾಡುವ 12 ತಂಡಗಳಲ್ಲಿ ಯಾರು ಚಾಂಪಿಯನ್​ಗಳಾಗ್ತಾರೋ ಅವರಿಗೆ ಸಿಗಲಿದೆ ಬಂಪರ್​​​​ ಬಹುಮಾನ. ಈ ಬಾರಿಯ ಪ್ರೊ ಕಬಡ್ಡಿ ಚಾಂಪಿಯನ್​ಗಳಿಗೆ ಸಿಗಲಿದೆ 2 ಕೋಟಿ ಬಹುಮಾನ. ಇನ್ನೂ ರನ್ನರ್​​​ ಅಪ್​ಗೆ ಸಿಗಲಿದೆ 1.80 ಕೋಟಿ. 3ನೇ ಸ್ಥಾನ ಗಳಿಸಿದವರಿಗೆ 1.20 ಕೋಟಿ. ಇನ್ನೂ ಶ್ರೇಷ್ಠ ಆಟಗಾರನಿಗೆ ಸಿಗಲಿದೆ ಬರೊಬ್ಬರಿ 15 ಲಕ್ಷ.

ಈ ಬಾರಿಯಾದ್ರೂ ಗೆಲ್ಲುತ್ತಾ ಬೆಂಗಳೂರು ಬುಲ್ಸ್​​​..?: ಬಲಿಷ್ಠವಾಗಿದೆ ರೋಹಿತ್​​ ಕುಮಾರ್​​​ ಪಡೆ

ಕಳೆದ 4 ಸೀಸನ್​ಗಳಲ್ಲಿ ಚಾಂಪಿಯನ್​ಗಳಾಗದೆ ತಮ್ಮ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಬೆಂಗಳೂರು ಬುಲ್ಸ್​​​​ ತಂಡ, ಈ ಬಾರಿ ಶತಾಯ ಗತಾಯ ಟ್ರೋಫಿ ಎತ್ತಿಹಿಡಿಯಲೇಬೇಕು ಎಂದು ಪಣ ತೊಟ್ಟಂತೆ ಕಾಣ್ತಿದೆ. ನಾಯಕ ರೋಹಿತ್​ ಕುಮಾರ್​​​ ಸೇರಿದಂತೆ ಅಜಯ್​​ ಕುಮಾರ್​​​, ರವೀಂದರ್​​​ ಪಾಹಲ್​, ಪ್ರದೀಪ್​​ ನರ್ವಾಲ್​​​, ಪ್ರೀಥಮ್​​ ಚಿಲ್ಲರ್​​​ ರಂತಹ ಘಟಾನುಘಟಿ ಆಟಗಾರರು ಈ ಬಾರಿ ಬೆಂಗಳೂರು ಬುಲ್ಸ್​​​ ತಂಡದಲ್ಲಿ ತೊಡೆ ತಟ್ಟಲಿದ್ದಾರೆ.

ಪ್ರತಿನಿತ್ಯ ಕೆಲಸದ ಒತ್ತಡದಿಂದ ಬಳಲಿ ಸಂಜೆ ಮನೆಗೆ ಬರೋ ಕ್ರೀಡಾಭಿಮಾನಿಗಳಿಗೆ ಇನ್ನೂ ಮೂರು ತಿಂಗಳು ಕಬಡ್ಡಿ ಕಿಕ್​ ನೀಡಲಿದೆ. ಕನ್ನಡದಲ್ಲೂ ಕಾಮೆಂಟ್ರಿ ಇರೋದ್ರಿಂದ ಕನ್ನಡದ ಕಬಡ್ಡಿ ರಸಿಕರಿಗೆ ಫುಲ್​ ಜೋಶ್​ ಬರಲಿದೆ.