ಎಡಗೈ ಸ್ಪಿನ್ನರ್ ಆಗಿರುವ ಜರ್ದಾನ್ 10 ಓವರ್ ಬೌಲಿಂಗ್ ಮಾಡಿದ ಜರ್ದಾನ್ 24 ರನ್ ನೀಡಿ 4 ವಿಕೆಟ್ ಕಬಳಿಸಿ ತಂಡಕ್ಕೆ ಗೆಲುವು ತಂದಿತ್ತರು. ಜೊತೆಗೆ ಪದಾರ್ಪಣಾ ಪಂದ್ಯದಲ್ಲಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದರು.
ಶಾರ್ಜಾ(ಡಿ.06): 21ನೇ ಶತಮಾನದಲ್ಲಿ ಜನಿಸಿ, ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಆಡಿದ ಮೊದಲ ಆಟಗಾರ ಎಂಬ ದಾಖಲೆಗೆ ಆಫ್ಘಾನಿಸ್ತಾನದ ಮುಜೀಬ್ ಜರ್ದಾನ್ ಪಾತ್ರರಾಗಿದ್ದಾರೆ.
2001ರ ಮಾ.28ರಂದು ಜನಿಸಿದ ಜರ್ದಾನ್ ಮಂಗಳವಾರ ಶಾರ್ಜಾದಲ್ಲಿ ಐರ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆಫ್ಘನ್ ತಂಡಕ್ಕೆ ಪದಾರ್ಪಣೆ ಮಾಡಿದರು. ಇದರೊಂದಿಗೆ ಪ್ರಸಕ್ತ ಅಂ.ರಾ.ಕ್ರಿಕೆಟ್ ಆಡುತ್ತಿರುವ ಕ್ರಿಕೆಟಿಗರ ಪೈಕಿ ಅತಿ ಕಿರಿಯ ಆಟಗಾರ ಎನಿಸಿಕೊಂಡರು.
ಎಡಗೈ ಸ್ಪಿನ್ನರ್ ಆಗಿರುವ ಜರ್ದಾನ್ 10 ಓವರ್ ಬೌಲಿಂಗ್ ಮಾಡಿದ ಜರ್ದಾನ್ 24 ರನ್ ನೀಡಿ 4 ವಿಕೆಟ್ ಕಬಳಿಸಿ ತಂಡಕ್ಕೆ ಗೆಲುವು ತಂದಿತ್ತರು. ಜೊತೆಗೆ ಪದಾರ್ಪಣಾ ಪಂದ್ಯದಲ್ಲಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾದರು. ಚೊಚ್ಚಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ತೋರಿರುವ ಜರ್ದಾನ್ ಮುಂಬರುವ ದಿನಗಳಲ್ಲಿ ಯಾವ ರೀತಿಯ ಪ್ರದರ್ಶನ ತೋರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
