Asianet Suvarna News Asianet Suvarna News

ಕೊರೋನಾ ಎಫೆಕ್ಟ್: ಕ್ರೀಡಾ ಪ್ರಶಸ್ತಿಗಳಿಗೆ ಈ-ಮೇಲ್‌ನಲ್ಲಿ ಅರ್ಜಿ ಆಹ್ವಾನ

ಕೊರೋನಾ ವೈರಸ್‌ನಿಂದಾಗಿ ಕ್ರೀಡಾ ಪ್ರಶಸ್ತಿಗಳಿಗಾಗಿ ಈ-ಮೇಲ್‌ ಮೂಲಕ ಅರ್ಜಿ ಸಲ್ಲಿಸುವಂತೆ ಕ್ರೀಡಾಪಟುಗಳಿಗೆ ಕ್ರೀಡಾ ಸಚಿವಾಲಯ ಸೂಚಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Coronavirus Effect Sports ministry invites nominations for national sports awards through e mail
Author
New Delhi, First Published May 6, 2020, 8:56 AM IST

ನವದೆಹಲಿ(ಮೇ.06): ಪ್ರತಿಷ್ಠಿತ ಖೇಲ್‌ ರತ್ನ, ಅರ್ಜುನ ಪ್ರಶಸ್ತಿಗಳಿಗೆ ಈ-ಮೇಲ್‌ ಮೂಲಕ ಅರ್ಜಿ ಸಲ್ಲಿಸುವಂತೆ ಕ್ರೀಡಾಪಟುಗಳು, ಕ್ರೀಡಾ ಸಂಸ್ಥೆಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸೂಚಿಸಿದೆ. ಈ ವರೆಗೂ ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಬೇಕಿತ್ತು. 

ಕೊರೋನಾ ಸೋಂಕಿನಿಂದಾಗಿ ಈ ಬಾರಿ ಈ-ಮೇಲ್‌ ಮುಖಾಂತರ ಅರ್ಜಿ ಸ್ವೀಕರಿಸಲು ಸಚಿವಾಲಯ ನಿರ್ಧರಿಸಿದೆ. ಪ್ರತಿ ವರ್ಷ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಆರಂಭಗೊಳ್ಳುತ್ತಿತ್ತು. ಆದರೆ ಈ ವರ್ಷ ಒಂದು ತಿಂಗಳು ತಡವಾಗಿದೆ. ಅರ್ಜಿ ಸಲ್ಲಿಸಲು ಜೂನ್‌ 3ರಂದು ಕೊನೆ ದಿನಾಂಕ ಎಂದು ಸಚಿವಾಲಯ ತಿಳಿಸಿದೆ.

ಕೊರೋನಾ ವೈರಸ್‌ ಭೀತಿಯಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಹಾರ್ಡ್ ಕಾಫಿಗಳನ್ನು ಕಳಿಸುವ ಅಗತ್ಯವಿಲ್ಲ. ಬದಲಾಗಿ ಸ್ಕ್ಯಾನ್ ಮಾಡಿದ ಕಾಫಿಗಳನ್ನು ಸಂಬಂಧಪಟ್ಟ ಶಿಫಾರಿಸಿನೊಂದಿಗೆ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದೇ ವೇಳೆ ನಿಗಧಿತ ಸಮಯದ ಬಳಿಕ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ.

ಟೀಂ ಇಂಡಿಯಾದ ಈ ಮಾಜಿ ನಾಯಕನಿಗಾಗಿ ಪ್ರಾಣ ನೀಡಲು ಸಿದ್ದವೆಂದ ಗೌತಮ್ ಗಂಭೀರ್..!

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ವಿವಿಧ ಮಜಲುಗಳನ್ನು ಹೊಂದಿದೆ: 

ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಗಳಾದ ಅರ್ಜುನ ಹಾಗೂ ಖೇಲ್‌ ರತ್ನ ಪ್ರಶಸ್ತಿಗಳನ್ನು ಶ್ರೇಷ್ಠ ಸಾಧನೆ ಮಾಡಿದ ಅಥ್ಲೀಟ್‌ಗಳಿಗೆ ನೀಡಲಾಗುತ್ತದೆ. ಇನ್ನು ದ್ರೋಣಾಚಾರ್ಯ ಪ್ರಶಸ್ತಿಯನ್ನು ಕೋಚ್‌ಗಳಿಗೆ ನೀಡಲಾಗುತ್ತದೆ. ಜೀವಮಾನದ ಶ್ರೇಷ್ಠ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ ನೀಡಲಾಗುತ್ತದೆ.

ಪ್ರಸಕ್ತ ವರ್ಷದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗೆ 2016ರ ಜನವರಿಯಿಂದ 2019ರ ಡಿಸೆಂಬರ್ ವರೆಗಿನ ಅವಧಿಯಲ್ಲಿ ಅತ್ಯುನ್ನತ ಪ್ರದರ್ಶನ ತೋರಿದ ಅಥ್ಲೀಟ್‌ಗಳನ್ನು ಪರಿಗಣಿಸಲಾಗುತ್ತದೆ. ಖೇಲ್ ರತ್ನ 7.5 ಲಕ್ಷ ರುಪಾಯಿ ನಗದು ಬಹುಮಾನ ಹೊಂದಿದ್ದರೆ, ಅರ್ಜುನ ಪ್ರಶಸ್ತಿ ವಿಜೇತರು ಫಲಕದ ಜತೆ 5 ಲಕ್ಷ ರುಪಾಯಿಗಳ ನಗದು ಬಹುಮಾನ ಪಡೆಯಲಿದ್ದಾರೆ.
ಇನ್ನು ಕಳೆದ ವರ್ಷ ಖೇಲ್ ರತ್ನ ಪ್ರಶಸ್ತಿಯನ್ನು ಖ್ಯಾತ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ಪ್ಯಾರಾಒಲಂಪಿಯನ್ ದೀಪಾ ಮಲಿಕ್‌ ಪಡೆದಿದ್ದರು.  
 

Follow Us:
Download App:
  • android
  • ios