4 ವಿಕೆಟ್'ಗಳ ನಷ್ಟಕ್ಕೆ 319 ರನ್'ಗಳಿಗೆ 4ನೇ ದಿನದಾಟ ಆರಂಭಿಸಿದ ಭಾರತ 488 ರನ್'ಗಳಿಗೆ ತನ್ನ ಎಲ್ಲ ವಿಕೆಟ್'ಗಳನ್ನು ಕಳೆದುಕೊಂಡು ಮೊದಲ ಇನ್ನಿಂಗ್ಸ್'ನಲ್ಲಿ 49 ರನ್'ಗಳ ಹಿನ್ನಡೆ ಅನುಭವಿಸಿತು. ಭಾರತದ ಪರ ಆರ್. ಅಶ್ವಿನ್ 70, ನಾಯಕ ಕೊಹ್ಲಿ 40 ಹಾಗೂ ವಿಕೇಟ್ ಕೀಪರ್ ವೃದ್ದಿಮಾನ್ ಸಹ 35 ರನ್ ಗಳಿಸಿದರು. ಇಂಗ್ಲೆಂಡ್ ಪರ ರಶೀದ್ 4,ಅಲಿ ಹಾಗೂ ಅನ್ಸಾರಿ ತಲಾ 2 ವಿಕೆಟ್'ಗಳನ್ನು ಕಬಳಿಸಿದರು.
ರಾಜ್'ಕೋಟ್(ನ.12): ಟೀಮ್ ಇಂಡಿಯಾ 163 ರನ್ಗಳ ಹಿನ್ನಡೆ ಸಾಧಿಸಿದ್ದು , ಕೊನೆಯ ದಿನವಾದ ನಾಳೆ ಪ್ರವಾಸಿ ಆಂಗ್ಲ ತಂಡದ ಬ್ಯಾಟ್ಸ್'ಮೆನ್'ಗಳು ದಿನಪೂರ್ತಿ ಆಟವಾಡುವ ಕಾರಣ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ.
4 ವಿಕೆಟ್'ಗಳ ನಷ್ಟಕ್ಕೆ 319 ರನ್'ಗಳಿಗೆ 4ನೇ ದಿನದಾಟ ಆರಂಭಿಸಿದ ಭಾರತ 488 ರನ್'ಗಳಿಗೆ ತನ್ನ ಎಲ್ಲ ವಿಕೆಟ್'ಗಳನ್ನು ಕಳೆದುಕೊಂಡು ಮೊದಲ ಇನ್ನಿಂಗ್ಸ್'ನಲ್ಲಿ 49 ರನ್'ಗಳ ಹಿನ್ನಡೆ ಅನುಭವಿಸಿತು. ಭಾರತದ ಪರ ಆರ್. ಅಶ್ವಿನ್ 70, ನಾಯಕ ಕೊಹ್ಲಿ 40 ಹಾಗೂ ವಿಕೇಟ್ ಕೀಪರ್ ವೃದ್ದಿಮಾನ್ ಸಹ 35 ರನ್ ಗಳಿಸಿದರು. ಇಂಗ್ಲೆಂಡ್ ಪರ ರಶೀದ್ 4,ಅಲಿ ಹಾಗೂ ಅನ್ಸಾರಿ ತಲಾ 2 ವಿಕೆಟ್'ಗಳನ್ನು ಕಬಳಿಸಿದರು.
48 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೆ ಭಾರತೀಯರ ಬೌಲರ್ಗಳನ್ನ ಕಾಡಿದರು. ನಾಯಕ ಅಲಸ್ಟೈರ್ ಕುಕ್ ಮತ್ತು ಹಸೀಬ್ ಹಮೀದ್ ಮೊದಲ ವಿಕೆಟ್ಗೆ ಅಜೇಯ 114 ರನ್ಗಳ ಜೊತೆಯಾಟವಾಡಿದರು.
ಚೊಚ್ಚಲ ಟೆಸ್ಟ್ ಆಡುತ್ತಿರುವ ಹಮೀದ್ ಮೊದಲ ಇನ್ನಿಂಗ್ಸ್ನಲ್ಲಿ 31 ರನ್ಗೆ ಔಟಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧ ಶತಕ ಬಾರಿಸಲು ಯಶಸ್ವಿಯಾದರು. ಹಮೀದ್ 5 ಬೌಂಡರಿ, 1 ಸಿಕ್ಸರ್'ನೊಂದಿಗೆ 62 ಹಾಗೂ ಕುಕ್ 3 ಬೌಂಡರಿಯೊಂದಿಗೆ 46 ರನ್ ಗಳಿಸಿದ್ದರು. ದಿನದಾಂತ್ಯಕ್ಕೆ ಇಂಗ್ಲೆಂಡ್ ತಂಡ 37 ಓವರ್'ಗಳಲ್ಲಿ 114 ರನ್ ಪೇರಿಸಿತ್ತು. ನಾಳೆ ಕೊನೆಯ ಒಂದು ದಿನ ಇರುವುದರಿಂದ ಆಂಗ್ಲರ ತಂಡದಲ್ಲಿ 10 ವಿಕೆಟ್'ಗಳಿದ್ದು ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ.
ಸ್ಕೋರ್
ಇಂಗ್ಲೆಂಡ್ : 537 ಹಾಗೂ ವಿಕೆಟ್ ನಷ್ಟವಿಲ್ಲದೆ 114
ಭಾರತ : 488
(ಇಂಗ್ಲೆಂಡ್'ಗೆ 163 ರನ್ ಮುನ್ನಡೆ)