2013ರಲ್ಲಿಯೂ ಕಾವಲು ಸಮಿತಿ ಇದೇ ರೀತಿ ದಂಡ ವಿಧಿಸಿತ್ತು. ಆದರೆ ಬಿಸಿಸಿಐ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದ ಪರಿಣಾಮ ಡವನ್ನು ರದ್ದುಗೊಳಿಸಲಾಗಿತ್ತು.
ನವದೆಹಲಿ(ನ.29): ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ವಿರೋಧಿ ಪಂದ್ಯಗಳನ್ನು ಆಯೋಜಿಸಿದ ಕಾರಣ ಭಾರತೀಯ ಸ್ಪರ್ಧಾತ್ಮಕ ಆಯೋಗವು(ಸಿಸಿಐ) ಬಿಸಿಸಿಐಗೆ 52.24 ಕೋಟಿ ರೂ. ದಂಡ ವಿಧಿಸಿದೆ.
2013ರಲ್ಲಿಯೂ ಕಾವಲು ಸಮಿತಿ ಇದೇ ರೀತಿ ದಂಡ ವಿಧಿಸಿತ್ತು. ಆದರೆ ಬಿಸಿಸಿಐ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದ ಪರಿಣಾಮ ದಂಡವನ್ನು ರದ್ದುಗೊಳಿಸಲಾಗಿತ್ತು.
ಭಾರತೀಯ ಸ್ಪರ್ಧಾತ್ಮಕ ಆಯೋಗದ ಪ್ರಕಟಿಸಿರುವ 44 ಪುಟಗಳ ಆದೇಶದಲ್ಲಿ ದಂಡವು ಬಿಸಿಸಿಐನ ಕಳೆದ ಮೂರು ಹಣಕಾಸು ವರ್ಷಗಳ ಸರಾಸರಿ ವಹಿವಾಟಿನ ಆದಾಯದ ಶೇ. 4.28 ರಷ್ಟು ಒಳಗೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಳೆದ ಮೂರು ವರ್ಷಗಳಲ್ಲಿ 1164.7 ಕೋಟಿ ರೂ. ವಹಿವಾಟು ನಡೆಸಿತ್ತು. ಆದೇಶದ ಪ್ರಕಾರ ಬಿಸಿಸಿಐ ಲಾಭಯೇತರ ಸಂಸ್ಥೆಯಾಗಿದ್ದು ಕ್ರಿಕೆಟ್'ನಿಂದ ಬಂದ ಆದಾಯವನ್ನು ಮರಳಿ ಕ್ರಿಕೆಟ್'ಗೆ ಮರಳಿಸಬೇಕಾಗಿದೆ.ಅಲ್ಲದೆ ಲಾಭದ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ.
