ಕಟಕ್(ಜು.20): ಭಾರತ ಟೇಬಲ್ ಟೆನಿಸ್ ಮಹಿಳಾ ತಂಡ, ಇಲ್ಲಿ ನಡೆಯುತ್ತಿರುವ 21ನೇ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್‌ನ ತಂಡಗಳ ಸ್ಪರ್ಧೆಯಲ್ಲಿ ಪುರುಷ ಹಾಗೂ ಮಹಿಳಾ ತಂಡಗಳು ಮೊದಲ ಬಾರಿಗೆ ಚಿನ್ನ ಗೆದ್ದು ದಾಖಲೆ ನಿರ್ಮಿಸಿವೆ. 

ಶುಕ್ರವಾರ ನಡೆದ ಫೈನಲ್‌ನಲ್ಲಿ ಮನಿಕಾ ಬಾತ್ರ, ಅರ್ಚನಾ, ಮಾಧುರಿಕ ಅವರಿದ್ದ ತಂಡ, ಇಂಗ್ಲೆಂಡ್ ವಿರುದ್ಧ 3-0ಯಿಂದ ಜಯಿಸಿತ್ತು. ಹರ್ಮಿತ್, ಸತ್ಯನ್, ಶರತ್ ಅವರಿದ್ದ ಪುರುಷರ ತಂಡ ಇಂಗ್ಲೆಂಡ್ ವಿರುದ್ಧ 3-2 ರಿಂದ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿತು.

ಭಾರತ ಟೇಬಲ್ ಟೆನಿಸ್ ತಂಡದ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.