*ವೇಟ್‌ಲಿಫ್ಟಿಂಗ್‌ನಲ್ಲಿ ಪದಕದ ಖಾತೆ ತೆರೆದ ಭಾರತ

ಬರ್ಮಿಂಗ್‌ಹ್ಯಾಮ್‌(ಜು.30): ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದ ಎರಡನೇ ದಿನ ಭಾರತ ವೇಟ್‌ಲಿಫ್ಟಿಂಗ್‌ನಲ್ಲಿ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಭಾರತದ ಸಂಕೇತ್ ಮಹದೇವ್ ಸಾಗರ್ 248 ಕೆಜಿ ಬಾರ ಎತ್ತುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. 

ಮಹಾರಾಷ್ಟ್ರ ಮೂಲದ ಸಂಕೇತ್ ಸಾಗರ್ ಭಾರತಕ್ಕೆ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕದ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ಯುವ ವೇಟ್‌ಲಿಫ್ಟರ್‌ 113 ಕೆಜಿ ಸ್ನ್ಯಾಚ್‌ ಹಾಗೂ 135 ಕೆಜಿ ಕ್ಲೀಜ್‌ ಅಂಡ್ ಜರ್ಕ್‌ ಹೀಗೆ ಒಟ್ಟಾರೆ 248 ಕೆಜಿ ಬಾರ ಎತ್ತವ ಮೂಲಕ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಲೇಷ್ಯಾದ ಅನಿಕ್‌ ಮೊಹಮ್ಮದ್‌, 249 ಕೆಜಿ(107ಕೆಜಿ ಸ್ನ್ಯಾಚ್‌, 142 ಕೆಜಿ ಕ್ಲೀನ್& ಜೆರ್ಕ್‌) ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಕೇತ್‌ಗಿಂತ ಕೇವಲ ಒಂದು ಕೆಜಿ ಹೆಚ್ಚು ಭಾರ ಎತ್ತಿದ ಮಲೇಷ್ಯಾದ ವೇಟ್‌ಲಿಫ್ಟರ್‌ ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದ್ದಾರೆ.

55 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ಸಂಕೇತ್ ಸಾಗರ್, ಖೇಲೋ ಇಂಡಿಯಾ ಯೂಥ್ ಗೇಮ್ಸ್‌ ಹಾಗೂ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ 2020 ಅದ್ಭುತ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಸಂಕೇತ್ ಸಾಗರ್ ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದರು.

ಸಂಕೇತ್ ಸಾಗರ್, 2022ರ ಫೆಬ್ರವರಿಯಲ್ಲಿ ಸಿಂಗಾಪುರದಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್ಸ್‌ನಲ್ಲಿ (113 ಕೆಜಿ ಸ್ನ್ಯಾಚ್‌, 143 ಕೆಜಿ ಕ್ಲೀನ್‌&ಜೆರ್ಕ್‌) 256 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ ಹಾಗೂ ನ್ಯಾಷನಲ್‌ ರೆಕಾರ್ಡ್‌ ನಿರ್ಮಿಸಿದ್ದರು.

Scroll to load tweet…