ಕುಂಬ್ಳೆ ಹಾಗೂ ಕೊಹ್ಲಿ ನಡುವೆ ವಿವಾದ ಉದ್ಭವಿಸಿದಂತೆ ಮುಂದಿನ ದಿನಗಳಲ್ಲಿ ಕೋಚ್ ಹಾಗೂ ನಾಯಕನ ನಡುವೆ ಸಮಸ್ಯೆ ಉಂಟಾದರೆ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಮನದಲ್ಲಿರಿಸಿಕೊಂಡು ಸಂದರ್ಶನಕಾರರು ಈ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.

ನವದೆಹಲಿ(ಜು.26): ಭಾರತ ಕ್ರಿಕೆಟ್ ತಂಡದ ವ್ಯವಸ್ಥಾಪಕ ಹುದ್ದೆಯ ಸಂದರ್ಶನಕ್ಕೆ ಹಾಜರಾದ 12 ಮಂದಿಗೂ ಸಂದರ್ಶನಕಾರರು ಬೌನ್ಸರ್ ಒಂದನ್ನು ಎಸೆದಿದ್ದಾರೆ.

ಮುಂಬೈ ಹಾಗೂ ನವದೆಹಲಿಯಲ್ಲಿ ಒಟ್ಟು 12 ಮಂದಿಯನ್ನು ಸಂದರ್ಶನ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಒಂದೊಮ್ಮೆ ನೀವು ತಂಡದ ವ್ಯವಸ್ಥಾಪಕರಾಗಿದ್ದರೆ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಹೇಗೆ ಬಗೆಹರಿಸುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆಂದು ತಿಳಿದು ಬಂದಿದೆ.

ಕುಂಬ್ಳೆ ಹಾಗೂ ಕೊಹ್ಲಿ ನಡುವೆ ವಿವಾದ ಉದ್ಭವಿಸಿದಂತೆ ಮುಂದಿನ ದಿನಗಳಲ್ಲಿ ಕೋಚ್ ಹಾಗೂ ನಾಯಕನ ನಡುವೆ ಸಮಸ್ಯೆ ಉಂಟಾದರೆ ಅದನ್ನು ಬಗೆಹರಿಸುವುದು ಹೇಗೆ ಎಂಬುದನ್ನು ಮನದಲ್ಲಿರಿಸಿಕೊಂಡು ಸಂದರ್ಶನಕಾರರು ಈ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.