ಏ.7ರಂದು ಈ ಆವೃತ್ತಿಯ ಮೊದಲ ಪಂದ್ಯಕ್ಕೂ ಮುನ್ನ ವಾಂಖೇಡೆ ಕ್ರೀಡಾಂಗಣದಲ್ಲೇ ಸಮಾರಂಭ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

ಮುಂಬೈ(ಮಾ.06): ಐಪಿಎಲ್ 11ನೇ ಆವೃತ್ತಿಯ ಉದ್ಘಾಟನಾ ಸಮಾರಂಭಕ್ಕೆಂದು ಮೀಸಲಿಟ್ಟಿದ್ದ 50 ಕೋಟಿ ಬಜೆಟ್ ಅನ್ನು ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ಕಡಿತಗೊಳಿಸಿದೆ. ಉದ್ಘಾಟನಾ ಸಮಾರಂಭಕ್ಕೆ 30 ಕೋಟಿ ಮಾತ್ರ ಬಳಸುವಂತೆ ಬಿಸಿಸಿಐ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಕಳೆದ ತಿಂಗಳು ನಡೆದಿದ್ದ ಐಪಿಎಲ್ ಆಡಳಿತ ಸಮಿತಿ ಸಭೆ ವೇಳೆ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ 50 ಕೋಟಿ ವೆಚ್ಚ ಮಾಡಲು ಬಿಸಿಸಿಐ ನಿರ್ಧರಿಸಿತ್ತು. ಇದೇ ವೇಳೆ ಏ.6ಕ್ಕೆ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ನಿಗದಿಯಾಗಿದ್ದ ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದ್ದು, ಏ.7ರಂದು ಈ ಆವೃತ್ತಿಯ ಮೊದಲ ಪಂದ್ಯಕ್ಕೂ ಮುನ್ನ ವಾಂಖೇಡೆ ಕ್ರೀಡಾಂಗಣದಲ್ಲೇ ಸಮಾರಂಭ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.

ಆಡಳಿತ ಸಮಿತಿ ಉದ್ಘಾಟನಾ ಸಮಾರಂಭದ ಬಜೆಟ್ ಕಡಿತಗೊಳಿಸಲು, ದಿನಾಂಕ ಬದಲಿಸಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.