ಕೆಕೆಆರ್ ತಂಡಕ್ಕೆ ಲಿನ್ ಕ್ಯಾಪ್ಟನ್..!

First Published 20, Feb 2018, 11:39 AM IST
Chris Lynn would love to captain Kolkata Knight Riders
Highlights

ಕಳೆದ ಆವೃತ್ತಿಯಲ್ಲಿ ಲಿನ್ ಕೆಕೆಆರ್ ಪರ 180.98ರ ಸ್ಟ್ರೈಕ್ ರೇಟ್'ನಲ್ಲಿ ಲಿನ್ 295 ರನ್ ಚಚ್ಚಿ ಗಮನ ಸೆಳೆದಿದ್ದರು. ಸದ್ಯದಲ್ಲೇ ಕೆಕೆಆರ್ ತಂಡ ಹೊಸ ನಾಯಕನನ್ನು ಘೋಷಿಸುವ ಸಾಧ್ಯತೆ ಇದೆ.

ನವದೆಹಲಿ(ಫೆ.20): ಆಸ್ಟ್ರೇಲಿಯಾದ ಕ್ರಿಸ್ ಲಿನ್, 11ನೇ ಆವೃತ್ತಿ ಐಪಿಎಲ್ ವೇಳೆ ಕೋಲ್ಕತಾ ನೈಟ್‌ರೈಡರ್ಸ್‌ (ಕೆಕೆಆರ್) ತಂಡದ ನೇತೃತ್ವ ವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ನಡೆದಿದ್ದ ಹರಾಜು ವೇಳೆ ಗೌತಮ್ ಗಂಭೀರ್, ಡೆಲ್ಲಿ ಡೇರ್‌'ಡೆವಿಲ್ಸ್ ಪಾಲಾಗಿದ್ದರು. ಇದರಿಂದ ಸದ್ಯ ಕೆಕೆಆರ್‌'ನ ನಾಯಕ ಸ್ಥಾನ ಖಾಲಿಯಿದೆ.

ಇತ್ತೀಚೆಗೆ ಕೆಕೆಆರ್‌ನ ಕೋಚ್ ಜಾಕ್ ಕಾಲೀಸ್ ಸಹ ₹9.6 ಕೋಟಿ ಕೊಟ್ಟು ಖರೀದಿಸಿದ್ದ ಲಿನ್ ಬಗ್ಗೆ ಒಲವು ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಲಿನ್, ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಕೆಲವರಂತೂ ಐಪಿಎಲ್'ನಲ್ಲಿ 10 ವರ್ಷ ಆಡಿದ ಆಟಗಾರರಿದ್ದಾರೆ. ಅವರ ಅನುಭವ ಕಡೆಗಣಿಸಲು ಸಾಧ್ಯವಿಲ್ಲ. ನನಗೆ ನಾಯಕನಾಗಲು ಅವಕಾಶ ಸಿಕ್ಕರೆ ಅದನ್ನು ಸದುಪಯೋಗಪಡಿಸಿಕೊಳ್ಳುವೆ. ನಾಯಕತ್ವವನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ.

ಕಳೆದ ಆವೃತ್ತಿಯಲ್ಲಿ ಲಿನ್ ಕೆಕೆಆರ್ ಪರ 180.98ರ ಸ್ಟ್ರೈಕ್ ರೇಟ್'ನಲ್ಲಿ ಲಿನ್ 295 ರನ್ ಚಚ್ಚಿ ಗಮನ ಸೆಳೆದಿದ್ದರು. ಸದ್ಯದಲ್ಲೇ ಕೆಕೆಆರ್ ತಂಡ ಹೊಸ ನಾಯಕನನ್ನು ಘೋಷಿಸುವ ಸಾಧ್ಯತೆ ಇದೆ.

loader