ಬ್ಯುಸಿನೆಸ್'ನಲ್ಲಿ ಹಣ ಹೂಡಿಕೆ ಮಾಡಲು ಭಾರತ ಪ್ರಶಸ್ತ ತಾಣವಾಗಿದ್ದು, ಇಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಲು ಬಯಸುತ್ತೇನೆ.- ಕ್ರಿಸ್ ಗೇಲ್

ಬೆಂಗಳೂರು(ಜು.14): ಟಿ20 ಕ್ರಿಕೆಟ್'ನ ದೈತ್ಯ ಪ್ರತಿಭೆ, ವೆಸ್ಟ್ ಇಂಡಿಸ್ ತಂಡದ ಸ್ಫೋಟಕ ಬ್ಯಾಟ್ಸ್'ಮನ್ ಕ್ರಿಸ್ ಗೇಲ್ ಬೆಂಗಳೂರಿನ ಐಯೋನಾ ಮನರಂಜನಾ ಕಂಪನಿಯೊಂದರ ಸಹ ಮಾಲೀಕರಾಗಿದ್ದಾರೆ.

ಐಯೋನ ಕಂಪನಿಯ ಪ್ರಚಾರ ರಾಯಭಾರಿಯಾಗಿದ್ದ ಆರ್'ಸಿಬಿ ಸ್ಟಾರ್ ಕ್ರಿಕೆಟಿಗ ಗೇಲ್, ಅದೇ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಸಹ ಮಾಲೀಕತ್ವವನ್ನು ಪಡೆದುಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಗೇಲ್, ಬ್ಯುಸಿನೆಸ್'ನಲ್ಲಿ ಹಣ ಹೂಡಿಕೆ ಮಾಡಲು ಭಾರತ ಪ್ರಶಸ್ತ ತಾಣವಾಗಿದ್ದು, ಇಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ ಐಯೋನಾ ಕಂಪನಿಯು ದೇಶದಲ್ಲಿ ವೀಡಿಯೋ ಗೇಮ್ಸ್'ನ್ನು ಮತ್ತಷ್ಟು ಮಕ್ಕಳಸ್ನೇಹಿಯನ್ನಾಗಿಸುವ ಗುರಿ ಹೊಂದಿದೆ. ಮೊದಲು ಈ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದೆ, ಕಂಪನಿಯ ಪ್ರಗತಿಯನ್ನು ಗಮನಿಸಿ ಸಹ ಮಾಲೀಕನಾದೆ ಎಂದು ತಿಳಿಸಿದ್ದಾರೆ.