ದೈತ್ಯ ಆಟಗಾರನನ್ನು ನೋಡಲು ಅಭಿಮಾನಿಗಳು ನೂಕು ನುಗ್ಗಲಿನಲ್ಲಿ ನೆರೆದಿದ್ದರು.

ವಿಂಡೀಸ್ ಕ್ರಿಕೆಟರ್, ರಾಯಲ್ ಚಾಲೆಂಜರ್ಸ್ ನ ದೈತ್ಯ ಆಟಗಾರ ಕ್ರಿಸ್ ಗೇಲ್ ಕರಾವಳಿಗೆ ಆಗಮಿಸಿದ್ದರು. ಸ್ಮ್ರಿನ್ ಆಫ್ ಬ್ರಾಂಡ್ ಪ್ರಚಾರಕ್ಕೆ ಆಗಮಿಸಿರುವ ಗೇಲ್'ರನ್ನು ವೈನ್ ಗೇಟ್ ಆಡಳಿತ ಸಾಂಪ್ರದಾಯಿಕವಾಗಿ ಸ್ವಾಗತಿಸಿತು. ಈ ವೇಳೆ ಗೇಲ್ ಕರಾವಳಿ ನಾಡಿನ ಎಳನೀರು ಸವಿದು ಸಂತಸ ವ್ಯಕ್ತಪಡಿಸಿದರು. ದೈತ್ಯ ಆಟಗಾರನನ್ನು ನೋಡಲು ಅಭಿಮಾನಿಗಳು ನೂಕು ನುಗ್ಗಲಿನಲ್ಲಿ ನೆರೆದಿದ್ದರು. ಈ ನೂಕುನುಗ್ಗಲಿನ ನಡುವೆಯೂ ಕರಾವಳಿಯಲ್ಲಿ ಕ್ರಿಸ್ ಗೇಲ್ ರೋಡ್ ಷೋ ನಡೆಸಿ ಅಭಿಮಾನಿಗಳಿಗೆ ದರ್ಶನ ನೀಡಿದರು.