ನೂರನೇ ಐಪಿಎಲ್ ಪಂದ್ಯದಲ್ಲಿ ಗೇಲ್ ಅನಾಯಾಸವಾಗಿ ವಿಕೆಟ್ ಒಪ್ಪಿಸಿದ ಕ್ಷಣವಿದು...

ಬೆಂಗಳೂರು(ಮೇ.07): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್'ಮನ್ ಐಪಿಎಲ್'ನ ತಮ್ಮ ನೂರನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವಲ್ಲಿ ವಿಫಲವಾದರು.

ಕೆಲದಿನಗಳ ಹಿಂದಷ್ಟೇ ಟಿ20 ಕ್ರಿಕೆಟ್'ನಲ್ಲಿ 10 ಸಾವಿರ ರನ್ ಬಾರಿಸಿ ದಾಖಲೆ ಬರೆದಿರುವ ಗೇಲ್ ತಮ್ಮ ಐಪಿಎಲ್'ನ ನೂರನೇ ಪಂದ್ಯದಲ್ಲಿ ಆರ್ಭಟಿಸಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಉಮೇಶ್ ಯಾದವ್ ಎಸೆದ ಮೊದಲ ಎಸೆತದಲ್ಲೇ ಗೌತಮ್ ಗಂಭಿರ್'ಗೆ ಕ್ಯಾಚ್ ನೀಡುವ ಮೂಲಕ ನಿರಾಸೆ ಮೂಡಿಸಿದರು.

ಹೀಗಿತ್ತು ನೂರನೇ ಐಪಿಎಲ್ ಪಂದ್ಯದಲ್ಲಿ ಗೇಲ್ ಅನಾಯಾಸವಾಗಿ ವಿಕೆಟ್ ಒಪ್ಪಿಸಿದ ಕ್ಷಣವಿದು...