ಐಪಿಎಲ್'ನಲ್ಲಿ ಹರಾಜಾಗದಿದ್ದರೂ ಇನ್ನೊಂದು ಬಂಪರ್ ಪಡೆದ ಟೀಂ ಇಂಡಿಯಾ ಆಟಗಾರ

First Published 30, Jan 2018, 6:00 PM IST
Cheteshwar Pujara to play in 2018 English cricket county season for Yorkshire
Highlights

ಐಪಿಎಲ್'ನಲ್ಲಿ ಸ್ಥಾನ ಸಿಗದಿದ್ದರೂ ಇಂಗ್ಲೆಂಡ್ ದೇಶಿ ಕೌಂಟಿ ತಂಡ ಯಾರ್ಕ್'ಶೈರ್ ತಂಡದಲ್ಲಿ 2018ರ ಅವಧಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮುಂಬೈ(ಜ.30): ಭಾರತ ಟೆಸ್ಟ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಚೇತೇಶ್ವರ ಪೂಜಾರ ಈ ಬಾರಿ ನಡೆಯುವ ಐಪಿಎಲ್'ನಲ್ಲಿ ಹರಾಜಾಗಲಿಲ್ಲ. ಪಟ್ಟಿಯಲ್ಲಿ ಹೆಸರಿದ್ದರೂ ಹರಾಜಿನಲ್ಲಿ ಇವರ ಹೆಸರನ್ನು ಯಾವ ತಂಡ ಕೂಡ ಪ್ರಸ್ತಾಪಿಸಲಿಲ್ಲ.

ಐಪಿಎಲ್'ನಲ್ಲಿ ಸ್ಥಾನ ಸಿಗದಿದ್ದರೂ ಇಂಗ್ಲೆಂಡ್ ದೇಶಿ ಕೌಂಟಿ ತಂಡ ಯಾರ್ಕ್'ಶೈರ್ ತಂಡದಲ್ಲಿ 2018ರ ಅವಧಿಯಲ್ಲಿ ಸ್ಥಾನ ಪಡೆದಿದ್ದಾರೆ. ಸ್ಥಾನ ಪಡೆದಿರುವ ಬಗ್ಗೆ ಸ್ವತಃ ಯಾರ್ಕ್'ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ತನ್ನ ವೆಬ್'ಸೈಟ್ ಹಾಗೂ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. 2015ರಲ್ಲಿಯೂ ಪೂಜಾರಾ ಇದೇ ಕ್ಲಬ್ ಪರ ಆಡವಾಡಿ 4 ಪಂದ್ಯಗಲಿಂದ 264 ರನ್ ಗಳಿಸಿದ್ದರು

ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸ್'ನ್ ಕೂಡ ಯಾರ್ಕ್'ಶೈರ್ ತಂಡದ ಪರ ಆಡುತ್ತಿದ್ದಾರೆ. ಇಂಗ್ಲೆಂಡ್'ನ ಈ ವರ್ಷದ ಕೌಂಟಿ ಪಂದ್ಯಗಳು ಏ.7ರಂದು ಶುರುವಾಗಲಿದೆ. ವೆಬ್'ಸೈಟ್ ಮಾಹಿತಿ ಪ್ರಕಾರ ಕೆಲವು ತಿಂಗಳ ಹಿಂದೆಯೇ ತಂಡದೊಂದಿಗೆ ಪೂಜಾರಾ ಅವರು ಸಹಿ ಹಾಕಿದ್ದು ಐಪಿಎಲ್ ಹರಾಜು ಪ್ರಕ್ರಿಯೆ ಕಾರಣ ಪ್ರಕಟಣೆಯನ್ನು ತಿಳಿಸಿರಲಿಲ್ಲ.

ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಪೂಜಾರ ಹರ್ಷ ವ್ಯಕ್ತ ಪಡಿಸಿದ್ದಾರೆ. ಯಾರ್ಕ್'ಶೈರ್ ತಂಡಕ್ಕೆ ಆಯ್ಕೆಯಾದ ಮೂರನೇ ಆಟಗಾರ ಇವರಾಗಿದ್ದು, ಈ ಮೊದಲು ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ಆಯ್ಕೆಯಾಗಿದ್ದರು.

loader