ಇತ್ತೀಚೆಗಷ್ಟೇ 12ನೇ ದ್ವಿಶತಕ ಸಿಡಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ಅತಿಹೆಚ್ಚು ದ್ವಿಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಪೂಜಾರ ಪಾತ್ರರಾಗಿದ್ದರು.  

ರಾಜ್‌'ಕೋಟ್(ನ.11): ಚೇತೇಶ್ವರ್ ಪೂಜಾರ, ‘ಬಿ’ ಗುಂಪಿನಲ್ಲಿ ಗುಜರಾತ್ ವಿರುದ್ಧದ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‌'ನಲ್ಲಿ 182 ರನ್ ಗಳಿಸುವ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌'ನಲ್ಲಿ ಪೂಜಾರ 21 ಬಾರಿ 150ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನಿಸಿದರು. ಪೂಜಾರ ಮೂರು ಬಾರಿ 300ಕ್ಕೂ ಹೆಚ್ಚು ರನ್, 9 ಬಾರಿ 200ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಇತ್ತೀಚೆಗಷ್ಟೇ 12ನೇ ದ್ವಿಶತಕ ಸಿಡಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್'ನಲ್ಲಿ ಅತಿಹೆಚ್ಚು ದ್ವಿಶತಕ ಸಿಡಿಸಿದ ಆಟಗಾರ ಎನ್ನುವ ಖ್ಯಾತಿಗೆ ಪೂಜಾರ ಪಾತ್ರರಾಗಿದ್ದರು.

ಕೆಲತಿಂಗಳ ಹಿಂದಷ್ಟೇ ಶ್ರೀಲಂಕಾ ಪ್ರವಾಸದಲ್ಲಿನ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ 153 ಹಾಗೂ 133 ರನ್ ಸಿಡಿಸಿದ್ದರು. ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 16ರಿಂದ ಆರಂಭವಾಗಲಿದ್ದು, ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.