ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ ಎಷ್ಟು?

First Published 15, Jun 2018, 9:25 PM IST
Chennai Super Kings is the most valuable IPL brand
Highlights

ಐಪಿಎಲ್ ಟೂರ್ನಿಯಲ್ಲಿರೋ 8 ತಂಡಗಳ ಪೈಕಿ ಗರಿಷ್ಠ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ತಂಡ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಾಗಾದರೆ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಗರಿಷ್ಠ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರುವ ಶ್ರೀಮಂತ ತಂಡ ಯಾವುದು? ಇಲ್ಲಿದೆ ವಿವರ

ಮುಂಬೈ(ಜೂ.15): ಕ್ರಿಕೆಟಿಗರಿಗೆ ಕೋಟಿ ಕೋಟಿ ರೂಪಾಯಿ ನೀಡಿ ಖರೀಧಿಸೋ ಐಪಿಎಲ್ ತಂಡಗಳ ಬ್ರ್ಯಾಂಡ್ ವ್ಯಾಲ್ಯೂ ಏಷ್ಟು ಅನ್ನೋದು ಬಹಿರಂಗವಾಗಿದೆ. ಬ್ರ್ಯಾಂಡ್ ಫಿನಾನ್ಸ್ ನಡೆಸಿದ ಅಧ್ಯಯನದ ಪ್ರಕಾರ ಗರಿಷ್ಠ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ ಬರೋಬ್ಬರಿ 443.72 ಕೋಟಿ ರೂಪಾಯಿ. 2 ವರ್ಷಗಳ ನಿಷೇಧದ ಬಳಿಕ 2018ರಲ್ಲಿ ಮತ್ತೆ ಐಪಿಎಲ್ ಟೂರ್ನಿ ಸೇರಿಕೊಂಡ ಸಿಎಸ್‌ಕೆ ಗರಿಷ್ಠ ಬ್ರ್ಯಾಂಡ್ ವ್ಯಾಲ್ಯೂ ಪಟ್ಟ ಬಾಚಿಕೊಂಡಿದೆ.

ಸಿಎಸ್‌ಕೆ ಬ್ರ್ಯಾಂಡ್ ವ್ಯಾಲ್ಯೂ 443 ಕೋಟಿ ರೂಪಾಯಿಗೇರಲು ನಾಯಕ ಎಮ್ ಎಸ್ ಧೋನಿ ಹಾಗೂ ತಂಡದ ಪ್ರದರ್ಶನ ಕಾರಣ ಎಂದು ಬ್ರ್ಯಾಂಡ್ ಫಿನಾನ್ಸ್ ವರದಿಯಲ್ಲಿ ಉಲ್ಲೇಖಿಸಿದೆ. ಇನ್ನು ಎರಡನೇ ಸ್ಥಾನದಲ್ಲಿರೋ ಕೋಲ್ಕತ್ತಾ ನೈಟ್ ರೈಡರ್ಸ್ 422.99 ಕೋಟಿ ರೂಪಾಯಿ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ . 

ಇತ್ತೀಚೆಗೆ ಮುಕ್ತಾಯಗೊಂಡ 11ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. 

loader