ಐಒಎ ಅಜೀವ ಅಧ್ಯಕ್ಷ ಸ್ಥಾನದಿಂದ ಸುರೇಶ್ ಕಲ್ಮಾಡಿ ಕೆಳಗಿಳಿದ ನಂತರ ಅಭಯ್ ಸಿಂಗ್ ಚೌತಾಲಾ ಕೂಡಾ ತಮ್ಮ ಹುದ್ದೆಯನ್ನು ತ್ಯಜಿಸಿಲು ಮುಂದಾಗಿದ್ದಾರೆ. ತಮ್ಮ ನೇಮಕಾತಿಯನ್ನು ಭಾರತೀಯ ಒಲಂಪಿಕ್ ಸಂಸ್ಥೆ ಒಪ್ಪದೇ ಇದ್ದರೆ ರಾಜಿನಾಮೆ ನೀಡಲು ಸಿದ್ಧವಿದ್ದೇನೆ ಎಂದಿದ್ದಾರೆ.
ನವದೆಹಲಿ (ಡಿ. 29): ಐಒಎ ಅಜೀವ ಅಧ್ಯಕ್ಷ ಸ್ಥಾನದಿಂದ ಸುರೇಶ್ ಕಲ್ಮಾಡಿ ಕೆಳಗಿಳಿದ ನಂತರ ಅಭಯ್ ಸಿಂಗ್ ಚೌತಾಲಾ ಕೂಡಾ ತಮ್ಮ ಹುದ್ದೆಯನ್ನು ತ್ಯಜಿಸಿಲು ಮುಂದಾಗಿದ್ದಾರೆ. ತಮ್ಮ ನೇಮಕಾತಿಯನ್ನು ಭಾರತೀಯ ಒಲಂಪಿಕ್ ಸಂಸ್ಥೆ ಒಪ್ಪದೇ ಇದ್ದರೆ ರಾಜಿನಾಮೆ ನೀಡಲು ಸಿದ್ಧವಿದ್ದೇನೆ ಎಂದಿದ್ದಾರೆ.
ಸುರೇಶ್ ಕಲ್ಮಾಡಿ ಪ್ರಕರಣ ಭಿನ್ನವಾದದ್ದು. ಕಾಮನ್ ವೆಲ್ತ್ ಕ್ರೀಡೆಗೆ ಸಂಬಂಧಿಸಿದಂತೆ ಕಲ್ಮಾಡಿಯವರ ಮೇಲೆ ಆರೋಪಗಳಿವೆ. ಹಾಗಾಗಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಆದರೆ ನನ್ನ ವಿಚಾರ ಇವರಿಗಿಂತ ಭಿನ್ನವಾದುದು ಎಂದು ಚೌತಾಲಾ ಹೇಳಿದ್ದಾರೆ.
ಐಒಎ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದೆ. ಆದರೆ ಅಂತರಾಷ್ಟ್ರೀಯ ಒಲಂಪಿಕ್ ಸಂಸ್ಥೆಯ ಮೂಗುತೂರಿಸುವಿಕೆಯಿಂದ ನಾನು ಹುದ್ದಯನ್ನು ತ್ಯಜಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಭಯ್ ಚೌತಾಲ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಕ್ರೀಡಾ ಇಲಾಖೆ ಇವರಿಗೆ ಶೋಕಾಸ್ ನೋಟಿಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಚೌತಾಲರವರು ರಾಜಿನಾಮೆಗೆ ಮುಂದಾಗಿದ್ದಾರೆ.
