Asianet Suvarna News Asianet Suvarna News

ಮಹಿಯನ್ನು ಒತ್ತಡಕ್ಕೆ ಸಿಲುಕಿಸಿತ್ತಾ ಕ್ಯಾಪ್ಟನ್ಸಿ..?

2016ರಲ್ಲಿ ಕೂಲ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ, 2017ರಲ್ಲಿ ವೈಲೆಂಟ್ ಆಗಿದ್ದೇಕೆ. ಟೀಕಾಕಾರರಿಗೆ ಹೆದರಿದ್ರಾ..? ಅಥವಾ ಯುವ ಆಟಗಾರರಿಗೆ ಬೆದರಿದ್ರಾ..? ಕಳೆದ ವರ್ಷ ಸೈಲೆಂಟ್ ಆಗಿದ್ದ ಧೋನಿ ಬ್ಯಾಟ್ ಈ ವರ್ಷ ವೈಲೆಂಟ್ ಆಗಿದ್ದೇಕೆ. ಮಹಿಯನ್ನ ಕಾಡುತ್ತಿದ್ದ ಆ ಒತ್ತಡ ಯಾವುದು? ಇಲ್ಲಿದೆ ವಿವರ

Change in Dhoni during Captaincy and after leaving His position

ಮಹೇಂದ್ರ ಸಿಂಗ್ ಧೋನಿ ಕೂಲ್ ಅಂತಲೇ ಫೇಮಸ್. ಎಂತಹ ಒತ್ತಡದ ಸಂದರ್ಭದಲ್ಲೂ ಟೆಕ್ಷನ್ ಆಗೋಲ್ಲ. ಇದುವರೆಗೂ ಧೋನಿಗೆ ಕ್ಯಾಪ್ಟನ್ಸಿ ಒತ್ತಡ ತಂದಿರಲಿಲ್ಲ ಅಂತ ಎಲ್ಲರೂ ಭಾವಿಸಿದ್ದರು. ನಾಯಕನಾದ್ಮೇಲೆ ಮಹಿ ಫರ್ಫಾಮೆನ್ಸ್ ಚೆನ್ನಾಗಿದೆ ಅಂತ ಅಂದುಕೊಂಡಿದ್ದರು. ಆದ್ರೆ ಈಗ ಆ ಮಾತು ಬದಲಿಸಬೇಕಿದೆ. ನಾಯಕತ್ವ ಅವರನ್ನ ಒತ್ತಡಕ್ಕೆ ಸಿಲುಕಿಸಿತ್ತು. ನಾಯಕತ್ವ ಬಿಟ್ಮೇಲೆಯೇ ಅವರು ಇನ್ನಷ್ಟು ಕೂಲ್ ಆಗಿರೋದು.

ನಾಯಕತ್ವ ತ್ಯಜಿಸಿದ ಮೇಲೆ ಧೋನಿ ಆಟ ಹೇಗಿದೆ ಗೊತ್ತಾ..?

ಇದೇ ವರ್ಷ ಆರಂಭದಲ್ಲಿ ಇಂಗ್ಲೆಂಡ್ ಸರಣಿಗೂ ಮುನ್ನ ರಾಂಚಿ ಱಂಬೋ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ದರು. ಅದುವರೆಗೂ ಸೈಲೆಂಟ್ ಆಗಿದ್ದ ಧೋನಿ ಬ್ಯಾಟ್​, ನಾಯಕತ್ವ ತ್ಯಜಿಸಿದ್ಮೇಲೆ ವೈಲೆಂಟ್ ಆಯ್ತು. ಹೌದು, ಈ ವರ್ಷ ಧೋನಿ ಫರ್ಫಾಮೆನ್ಸ್ ಅದ್ಭುತವಾಗಿದೆ. ಅವರ ಬ್ಯಾಟ್​ ಝಳಪಿಸಿದ್ದಾರೆ. ಸಿಕ್ಕಸಿಕ್ಕ ಬೌಲರ್​ಗಳನ್ನ ದಂಡಿಸಿ ರನ್ ಗುಡ್ಡೆಹಾಕಿದ್ದಾರೆ. ಕಳೆದ ವರ್ಷ ಮಂಕಾಗಿದ್ದ ಅವರು ಈ ವರ್ಷ ರನ್ ಶಿಖರವೇರಿದ್ದಾರೆ.

2017ರಲ್ಲಿ 19 ಪಂದ್ಯಗಳಲ್ಲಿ 14 ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್ ಮಾಡಿರುವ ಧೋನಿ, 89.57ರ ಸರಾಸರಿಯಲ್ಲಿ 627 ರನ್ ಹೊಡೆದಿದ್ದಾರೆ. 1 ಶತಕ ಮತ್ತು ಐದು ಅರ್ಧಶತಕಗಳು ಇದರಲ್ಲಿವೆ. 7 ಪಂದ್ಯಗಳಲ್ಲಿ ಅಜೇಯರಾಗು ಉಳಿದಿದ್ದಾರೆ.

ಧೋನಿ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 13 ವರ್ಷಗಳಾಗಿವೆ. ಕಳೆದ 13 ವರ್ಷಕ್ಕೆ ಹೋಲಿಸಿದ್ರೆ 2017ರಲ್ಲಿ ಅವರ ಫರ್ಫಾಮೆನ್ಸ್ ಅತ್ಯುತ್ತಮವಾಗಿದೆ. ಹೆಚ್ಚು ಸರಾಸರಿ ಹೊಂದಿರೋದು ಇದೇ ವರ್ಷ.

ಧೋನಿ ಚೆನ್ನೈನ ತಲೈವಾ

ಚೆನ್ನೈ ಧೋನಿಗೆ ಎರಡನೇ ತವರು. ಹೀಗಾಗಿಯೇ ಅವರಿಗೆ ಚೆನ್ನೈನಲ್ಲಿ ಅಭಿಮಾನಿಗಳು ಸಾಕಷ್ಟು ಇರೋದು. ಮೊನ್ನೆ ಬ್ಯಾಟಿಂಗ್​​ಗೆ ಮಹಿ ಬಂದಾಗ ಅದ್ದೂರಿ ಸ್ವಾಗತ ಸಿಕ್ಕಿದ್ದು. ಆಸೀಸ್​ ವಿರುದ್ಧ 79 ರನ್ ಬಾರಿಸಿದ್ದ ಧೋನಿ, ಈಗ ಚೆಪಾಕ್ ಸ್ಟೇಡಿಯಂನಲ್ಲಿ ಗರಿಷ್ಠ ರನ್ ಸರದಾರ. ಚೆನ್ನೈನಲ್ಲಿ ಧೋನಿ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ ಅನ್ನೋದು ಇದರಲ್ಲೇ ಗೊತ್ತಾಗುತ್ತೆ.

ಚೆನ್ನೈನಲ್ಲಿ ಧೋನಿ 6 ಏಕದಿನ ಪಂದ್ಯಗಳನ್ನಾಡಿದ್ದು, 100.25ರ ಸರಾಸರಿಯಲ್ಲಿ 401 ರನ್​ ಕಲೆಹಾಕಿದ್ದಾರೆ. 101.77ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟಿಂಗ್ ಮಾಡಿ 2 ಶತಕ, ಒಂದು ಅರ್ಧಶತಕವನ್ನೂ ದಾಖಲಿಸಿದ್ದಾರೆ.

ಆಸೀಸ್ ವಿರುದ್ಧವೇ ಹೊಡೆಯುತ್ತಾರಾ 10 ಸಾವಿರ ರನ್

ಇದೇ ವರ್ಷ ಧೋನಿ ಅನೇಕ ರೆಕಾರ್ಡ್​ಗಳನ್ನ ಮಾಡಿದ್ದಾರೆ. ಒಂಡೇ ಕ್ರಿಕೆಟ್​ನಲ್ಲಿ ನೂರು ಸ್ಟಂಪೌಟ್​. 300 ಏಕದಿನ ಪಂದ್ಯ. 100 ಅರ್ಧಶತಕಗಳು. ಹೀಗೆ ಅನೇಕ ದಾಖಲೆಗಳನ್ನ ಮಾಡಿರುವ ಮಹಿ ಮತ್ತೊಂದು ದಾಖಲೆ ಮಾಡೋ ಹೊಸ್ತಿಲಲ್ಲಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 10 ಸಾವಿರ ರನ್ ಸಾಧನೆಗೆ ಮಹಿಗೆ ಇನ್ನು 263 ರನ್ ಬೇಕಿದೆ. ಅದು ಆಸೂಸ್ ವಿರುದ್ಧವೇ ಆದ್ರೆ ಧೋನಿ ರನ್​ ಶಿಖರವೇರಲಿದ್ದಾರೆ.

Follow Us:
Download App:
  • android
  • ios