ಪಾಕಿಸ್ತಾನ, ಅರ್ಜೆಂಟೀನಾ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗೆಲುವಿನ ನಗೆ ಬೀರಿದ್ದ ಭಾರತ, ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲಿಗೆ ಶರಣಾಗಿದೆ. ಆದರೆ ಭಾರತದ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹೇಗಿತ್ತು ಟೀಂ ಇಂಡಿಯಾ ಪ್ರದರ್ಶನ? ಇಲ್ಲಿದೆ ವಿವರ.
ಬ್ರೆಡಾ(ಜೂ.27): ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಹಾಗೂ ಅರ್ಜೆಂಟೀನಾ ತಂಡವನ್ನ ಮಣಿಸಿ ಯಶಸ್ಸಿ ಅಲೆಯಲ್ಲಿದ್ದ ಭಾರತ ತಂಡಕಕ್ಕೆ ಆಸ್ಟ್ರೇಲಿಯಾ ಶಾಕ್ ನೀಡಿದೆ. ವಿಶ್ವ ನಂ.1 ಹಾಕಿ ತಂಡದ ವಿರುದ್ಧದ ಹೋರಾಟದಲ್ಲಿ ಭಾರತ 1-3 ಅಂತರದಲ್ಲಿ ಸೋಲು ಅನುಭವಿಸಿದೆ.
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭಾರತದ ಹೋರಾಟಕ್ಕೆ ಯಶಸ್ಸು ಸಿಗಲಿಲ್ಲ. ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಆಸ್ಟ್ರೇಲಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಲಚ್ಲಾನ್ ಶಾರ್ಪ್ ಸಿಡಿಸಿದ ಗೋಲಿನಿಂದ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿತು.
ಹಿನ್ನಡೆ ಅನುಭವಿಸಿದ ಭಾರತಕ್ಕೆ ವರುಣ್ ಕುಮಾರ್ ಸಿಡಿಸಿದ ಗೋಲು ಉತ್ಸಾಹವನ್ನ ಇಮ್ಮಡಿಗೊಳಿಸಿತು. ಭಾರತ 1-1 ಅಂತರದಲ್ಲಿ ಸಮಭಲ ಸಾಧಿಸಿತು. ಆದರೆ ಭಾರತದ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಆಸ್ಟ್ರೇಲಿಯಾದ ಟಾಮ್ ಕ್ರೈಗ್ ಸಿಡಿಸಿದ ಗೋಲಿನಿಂದ ಆಸ್ಟ್ರೇಲಿಯಾ 2-1 ಮುನ್ನಡೆ ಸಾಧಿಸಿತು. ಮೊದಲಾರ್ಧದ ಮುಕ್ತಾಯದ ವೇಳೆ ಆಸ್ಟ್ರೇಲಿಯಾ 2-1 ಮುನ್ನಡೆ ಕಾಯ್ದುಕೊಂಡಿತು.
ದ್ವಿತಿಯಾರ್ಧದಲ್ಲೂ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು. ಮಿಲ್ಟನ್ ಸಿಡಿಸಿದ ಗೋಲಿನಿಂದ ಆಸ್ಟ್ರೇಲಿಯಾ 3-1 ಮುನ್ನಡೆ ಕಾಯ್ದಕೊಂಡಿತು. ಪಂದ್ಯದ ಅಂತಿಮ ಘಟ್ಟ ತಲುಪುತ್ತಿದ್ದಂತೆ, ಭಾರತದ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಸಿಡಿಸಿದ ಗೋಲಿನಿಂದ ಹಿನ್ನಡೆ ಅಂತರವನ್ನ 2-3ಕ್ಕೆ ತಗ್ಗಿಸಿತು.
ಅಂತಿಮ ಹಂತದಲ್ಲಿ ಭಾರತ ತಿರುಗೇಟು ನೀಡಿದರೂ ಪ್ರಯೋಜನವಾಗಲಿಲ್ಲ. 2-3 ಅಂತರದಲ್ಲಿ ಭಾರತ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿತ್ತು.
