ಇನ್ನು ದ್ವಿತಿಯಾ ಕ್ವಾರ್ಟರ್’ನಲ್ಲಿ ವಿಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿದ ಭಾರತ ಆರಂಭದಲ್ಲೇ ಗೋಲು ಬಾರಿಸಿತು. ಪಂದ್ಯದ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡ ಹರ್ಮನ್’ಪ್ರೀತ್ ಸಿಂಗ್[17 ನಿ] ಭರ್ಜರಿ ಗೋಲು ಬಾರಿಸುವುದರೊಂದಿಗೆ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.

ಬ್ರೇಡಾ[ಜೂ.24]: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-0 ಗೋಲುಗಳಿಂದ ಬಗ್ಗುಬಡಿದಿದ್ದ ಹಾಕಿ ಟೀಂ ಇಂಡಿಯಾ ಇಂದು ವಿಶ್ವದ 2ನೇ ಶ್ರೇಯಾಂಕಿತ ಬಲಿಷ್ಠ ಅರ್ಜೆಂಟೀನಾ ತಂಡವನ್ನು 2-1 ಗೋಲುಗಳಿಂದ ಮಣಿಸಿ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಆಡಿದ 300ನೇ ಪಂದ್ಯವನ್ನು ಗೆಲ್ಲುವಲ್ಲಿ ಶ್ರೀಜೇಶ್ ಪಡೆ ಯಶಸ್ವಿಯಾಗಿದೆ.

ಆರಂಭದಿಂದಲೇ ಉಭಯ ತಂಡಗಳು ಆಕ್ರಮಣಕಾರಿಯಾಟಕ್ಕೆ ಮುಂದಾದವು. ಆರಂಭದಲ್ಲೇ ಅರ್ಜೆಂಟೀನಾ ಗೋಲು ಗಳಿಸುವ ಅವಕಾಶವನ್ನು ಗೋಲ್ ಕೀಪರ್ ಶ್ರೀಜೇಶ್ ವಿಫಲಗೊಳಿಸಿದರು. ಇದರ ಬೆನ್ನಲ್ಲೇ ಮನ್’ಪ್ರೀತ್ ಸಿಂಗ್ ಗಾಯಗೊಂಡು ಹೊರನಡೆದರು. ಹೀಗಾಗಿ ಮೊದಲ ಕ್ವಾರ್ಟರ್’ನಲ್ಲಿ ಎರಡು ತಂಡಗಳು ಗೋಲುಗಳಿಸಲು ವಿಫಲವಾದವು. 

Scroll to load tweet…

ಇನ್ನು ದ್ವಿತಿಯಾ ಕ್ವಾರ್ಟರ್’ನಲ್ಲಿ ವಿಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿದ ಭಾರತ ಆರಂಭದಲ್ಲೇ ಗೋಲು ಬಾರಿಸಿತು. ಪಂದ್ಯದ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡ ಹರ್ಮನ್’ಪ್ರೀತ್ ಸಿಂಗ್[17 ನಿ] ಭರ್ಜರಿ ಗೋಲು ಬಾರಿಸುವುದರೊಂದಿಗೆ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಇದರ ಬೆನ್ನಲ್ಲೇ ಮತ್ತೋರ್ವ ಆಟಗಾರ ಸುರೇಂದರ್ ಕುಮಾರ್ ಕೂಡಾ ಗಾಯಗೊಂಡು ಹೊರನಡೆದರು. ಇದಾದ 5 ನಿಮಿಷದಲ್ಲೇ ಮನ್ದೀಪ್ ಸಿಂಗ್[28] ಗೋಲು ಬಾರಿಸುವುದರೊಂದಿಗೆ ಗೋಲುಗಳ ಅಂತರವನ್ನು 2-0ಗೆ ಹಿಗ್ಗಿಸಿದರು. ಇದು ಚಾಂಪಿಯನ್ಸ್ ಟ್ರೋಫಿಯಲ್ಲಿ ಮನ್ದೀಪ್ ಸಿಂಗ್ ಬಾರಿಸಿದ ಎರಡನೇ ಗೋಲು ಆಗಿದೆ. ಇನ್ನು ಪಂದ್ಯದ 29ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶ ಬಳಸಿಕೊಂಡ ಅರ್ಜೆಂಟೀನಾ ಗೋಲು ಗಳಿಸುವಲ್ಲಿ ಸಫಲವಾಯಿತು. ಪೀಲ್ಲೆಟ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 2-1ರ ಮುನ್ನಡೆ ಕಾಯ್ದುಕೊಂಡಿತ್ತು. 
ದ್ವಿತಿಯಾರ್ಧದಲ್ಲಿ ಎಚ್ಚರಿಕೆಯ ಆಟವಾಡಿದ ಶ್ರೀಜೇಶ್ ಪಡೆ 2-1 ಗೋಲುಗಳಿಂದ ಗೆಲುವಿನ ನಗೆ ಬೀರಿತು.