‘‘ಸಿಯೆಟ್ ಜತೆಗೆ ಕೈಜೋಡಿಸುತ್ತಿರುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ. ಕ್ರಿಕೆಟ್ ಜತೆಗೆ ಉತ್ತಮ ಸಂಬಂಧ ಹೊಂದಿರುವ ಅದರೊಂದಿಗಿನ ನನ್ನ ಒಪ್ಪಂದದ ಅವಧಿ ಫಲಪ್ರದವಾಗಿರುವ ವಿಶ್ವಾಸವಿದೆ’’ ಎಂದು ರಹಾನೆ ಹೇಳಿದ್ದಾರೆ.

ಮುಂಬೈ(ಅ.24): ಭಾರತ ಏಕದಿನ ತಂಡದ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ ಸಿಯೆಟ್ ಲಿಮಿಟೆಡ್ ಕಂಪೆನಿಯ ಪ್ರಚಾರ ರಾಯಭಾರಿಯಾಗಿ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾ, ಸುರೇಶ್ ರೈನಾ ಮತ್ತು ಈಶನ್ ಕಿಶನ್ ಜತೆಗೆ ರಹಾನೆ ಸೇರ್ಪಡೆಗೊಂಡಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಕೆಲವು ವರ್ಷಗಳಿಂದ ಮೂರು ಪ್ರಕಾರದ ಕ್ರಿಕೆಟ್‌ನಲ್ಲಿ ಭಾರತ ತಂಡದ ಕಾಯಂ ಆಟಗಾರನಾಗಿ ರೂಪುಗೊಂಡಿರುವ ರಹಾನೆ, ಮುಂದಿನ ದಿನಗಳಲ್ಲಿ ರಹಾನೆ ಬ್ಯಾಟ್ ಮೇಲೆ ಸಿಯೆಟ್ ಲೋಗೋ ರಾರಾಜಿಸಲಿದೆ.

‘‘ಸಿಯೆಟ್ ಜತೆಗೆ ಕೈಜೋಡಿಸುತ್ತಿರುವುದಕ್ಕೆ ನನಗೆ ಅತೀವ ಸಂತಸವಾಗುತ್ತಿದೆ. ಕ್ರಿಕೆಟ್ ಜತೆಗೆ ಉತ್ತಮ ಸಂಬಂಧ ಹೊಂದಿರುವ ಅದರೊಂದಿಗಿನ ನನ್ನ ಒಪ್ಪಂದದ ಅವಧಿ ಫಲಪ್ರದವಾಗಿರುವ ವಿಶ್ವಾಸವಿದೆ’’ ಎಂದು ರಹಾನೆ ಹೇಳಿದ್ದಾರೆ.