ಅಗರ್ತಲಾದಲ್ಲಿ ರಸ್ತೆಗಳು ಸರಿಯಿಲ್ಲದ್ದು ಹಾಗೂ ಇನ್ನಿತರ ಕಾರಣಗಳಿಂದಾಗಿ ದೀಪಾ ಬಿಎಂಡಬ್ಲ್ಯೂ ಕಾರನ್ನು ಹಿಂದಿರುಗಿಸಿದ್ದಾರೆ.
ಅಗರ್ತಲಾ(ಡಿ.30): ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಅವರು, ಉಡುಗೊರೆ ರೂಪದಲ್ಲಿ ತಮಗೆ ನೀಡಲಾಗಿದ್ದ ಬಿಎಂಡಬ್ಲ್ಯೂಕಾರನ್ನು ಹಿಂದಿರುಗಿಸಿದ್ದ ಹಿನ್ನೆಲೆಯಲ್ಲಿ ತಮಗೆ ಬಂದ ₹ 25 ಲಕ್ಷ ಮೊತ್ತದಿಂದ ಹುಂಡೈ ಕಂಪನಿಯ ಎಲಾಂಟ್ರಾ ಕಾರು ಕೊಂಡಿರುವುದಾಗಿ ವರದಿಯಾಗಿದೆ.
ಒಲಿಂಪಿಕ್ಸ್'ನ ಮಹಿಳಾ ಜಿಮ್ನಾಸ್ಟಿಕ್ಸ್‌ಗೆ ಕಾಲಿಟ್ಟು ಫೈನಲ್ ತಲುಪಿದ ಮೊಟ್ಟಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದ ಹಿನ್ನೆಲೆಯಲ್ಲಿ ದೀಪಾ ಅವರಿಗೆ, ಹೈದರಾಬಾದ್ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ವಿ. ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರು ನೀಡಿ ಗೌರವಿಸಿದ್ದರು.
ಆದರೆ, ಅಗರ್ತಲಾದಲ್ಲಿ ರಸ್ತೆಗಳು ಸರಿಯಿಲ್ಲದ್ದು ಹಾಗೂ ಇನ್ನಿತರ ಕಾರಣಗಳಿಂದಾಗಿ ದೀಪಾ ಬಿಎಂಡಬ್ಲ್ಯೂ ಕಾರನ್ನು ಹಿಂದಿರುಗಿಸಿದ್ದಾರೆ.
