ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಹೆಸರು ಶಿಫಾರಸು

ಭಾರತದ ಪ್ರತಿಷ್ಠಿತ ಖೇಲ್ ರತ್ನಾ ಕ್ರೀಡಾ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರನ್ನ ಶಿಫಾರಸು ಮಾಡಲಾಗಿದೆ. ಕೊಹ್ಲಿ ಹೆಸರು ಅಂತಿಮವಾದರೆ ಈ ಪ್ರಶಸ್ತಿ ಪಡೆಯುತ್ತಿರುವ 3ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.

Captain Virat Kohli recommended for Khel Ratna award

ಮುಂಬೈ(ಸೆ.17): ಭಾರತದ ಪ್ರತಿಷ್ಠಿತ  ಖೇಲ್ ರತ್ನ ಕ್ರೀಡಾ ಪ್ರಶಸ್ತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರನ್ನ ಶಿಫಾರಸು ಮಾಡಲಾಗಿದೆ. ಕೊಹ್ಲಿ ಹೆಸರು ಅಂತಿವಾದರೆ ಖೇಲ್ ರತ್ನ ಕ್ರೀಡಾ ಪ್ರಶಸ್ತಿ ಪಡೆಯುತ್ತಿರುವ 3ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವದ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಪೈಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಿದ್ದರು. ಇದೀಗ ಕೊಹ್ಲಿ ಹೆಸರನ್ನ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕ್ರಿಕೆಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಎಂ ಎಸ್ ಧೋನಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಹೆಸರಿನ ಜೊತೆ ಮಹಿಳಾ ವೈಟ್‌ಲಿಫ್ಟರ್ ಮೀರಾಬಾಯಿ ಚಾನು ಹೆಸರನ್ನೂ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
 

Latest Videos
Follow Us:
Download App:
  • android
  • ios