ಲಾಹೋರ್‌'ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಚರ್ಡ್‌'ಸನ್, ‘ಪಾಕ್ ಜತೆ ಕ್ರಿಕೆಟ್ ಆಡಲು ಭಾರತವೇ ಸಿದ್ಧವಿಲ್ಲ ಎಂದಾದರೆ, ಅದರ ಮೇಲೆ ಒತ್ತಡ ಹೇರಲು ಹೇಗೆ ಸಾಧ್ಯ’ ಎಂದಿದ್ದಾರೆ.

ಕರಾಚಿ(ಸೆ.15): ಪಾಕಿಸ್ತಾನದ ವಿರುದ್ಧ ದ್ವಿಪಕ್ಷೀಯ ಸರಣಿ ಆಡುವಂತೆ ಭಾರತದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವ್ ರಿಚರ್ಡ್‌'ಸನ್ ಸ್ಪಷ್ಟಪಡಿಸಿದ್ದಾರೆ.

ಲಾಹೋರ್‌'ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಚರ್ಡ್‌'ಸನ್, ‘ಪಾಕ್ ಜತೆ ಕ್ರಿಕೆಟ್ ಆಡಲು ಭಾರತವೇ ಸಿದ್ಧವಿಲ್ಲ ಎಂದಾದರೆ, ಅದರ ಮೇಲೆ ಒತ್ತಡ ಹೇರಲು ಹೇಗೆ ಸಾಧ್ಯ’ ಎಂದಿದ್ದಾರೆ.

‘ದ್ವಿಪಕ್ಷೀಯ ಸರಣಿ ನಡೆಯಬೇಕಾದರೆ, ಎರಡು ದೇಶಗಳ ಅನುಮತಿ ಅಗತ್ಯ. ಭಾರತ- ಪಾಕ್ ನಡುವೆ ಸರಣಿ ನಡೆಯಬೇಕೆಂದು ನಾವು ಬಯಸುತ್ತೇವೆ, ಆದರೆ ಎರಡೂ ದೇಶಗಳ ನಡುವಿನ ರಾಜಕೀಯ ಸಂಬಂಧ ಹದಗೆಟ್ಟಿರುವಾಗ ಇದು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.