'ನಾನು ಜೀವನದಲ್ಲಿ ಒಮ್ಮೆಯಾದರು ನಡಾಲ್, ಫೆಡರರ್, ಮರ್ರೆಯವರಂತಹ ದಿಗ್ಗಜರೊಂದಿಗೆ ಆಡಬೇಕೆಂದು ಕನಸು ಕಾಣುತ್ತಿದ್ದೆ. ಇಂದು ಆ ಕನಸು ನನಸಾಗಿದೆ' ಎಂದು ಗೆಲುವಿನ ಬಳಿಕ ಶಾಪೊವಾಲ್ವೊ ತಿಳಿಸಿದ್ದಾರೆ.  

ಮಾಂಟ್ರೆಲ್(ಆ.11): ಫ್ರೆಂಚ್ ಓಪನ್ ಚಾಂಪಿಯನ್ ಸ್ಪೇನ್‌'ನ ಸ್ಟಾರ್ ಟೆನಿಸಿಗ ರಾಫೆಲ್ ನಡಾಲ್, ಎಟಿಪಿ ಮಾಂಟ್ರೆಲ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರೀ ರ್ಕ್ವಾಟರ್‌'ಫೈನಲ್‌ನಲ್ಲಿ ಕೆನಡಾದ 18 ವರ್ಷದ ಯುವ ಆಟಗಾರನೆದುರು ಸೋಲುಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುರುವಾರ ತಡರಾತ್ರಿ ನಡೆದ ಸಿಂಗಲ್ಸ್‌'ನ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ನಡಾಲ್ 6-3, 4-6, 6-7(4-7) ಸೆಟ್‌'ಗಳಿಂದ ಕೆನಡಾದ ಡೆನ್ನಿಸ್ ಶಾಪೊವಾಲ್ವೊ ಎದುರು ಪರಾಭವ ಹೊಂದಿದರು. ಈ ಮೂಲಕ ಶಾಪೊವಾಲ್ವೊ ಕ್ವಾರ್ಟರ್‌'ಫೈನಲ್ ಹಂತಕ್ಕೆ ಲಗ್ಗೆ ಇಟ್ಟರು.

ಪಂದ್ಯದ ಮೊದಲ ಸೆಟ್‌'ನಲ್ಲಿ ಸುಲಭ ಗೆಲುವು ಪಡೆದ ನಡಾಲ್‌'ಗೆ ಇನ್ನುಳಿದ ಎರಡೂ ಸೆಟ್‌'ಗಳಲ್ಲಿ ಎದುರಾಳಿ ಆಟಗಾರ ತಿರುಗೇಟು ನೀಡುವಲ್ಲಿ ಸಫಲರಾದರು. 3ನೇ ಸೆಟ್‌'ನಲ್ಲಿ ಟೈ ಬ್ರೇಕರ್ ಅವಕಾಶದಿಂದ ಕೆನಡಾದ ಆಟಗಾರ ಅಂಕ ಹೆಚ್ಚಿಸಿಕೊಂಡು ಪಂದ್ಯ ಜಯಿಸಿದರು. ಈ ಮೂಲಕ ಎಟಿಪಿ ಮಾಂಟ್ರೆಲ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್'ಫೈನಲ್ ಪ್ರವೇಶಿಸಿದ ಅತಿ ಕಿರಿಯ ಆಟಗಾರ ಎನ್ನುವ ಖ್ಯಾತಿಗೂ ಕೆನಡಾದ ಆಟಗಾರ ಪಾತ್ರರಾದರು.

'ನಾನು ಜೀವನದಲ್ಲಿ ಒಮ್ಮೆಯಾದರು ನಡಾಲ್, ಫೆಡರರ್, ಮರ್ರೆಯವರಂತಹ ದಿಗ್ಗಜರೊಂದಿಗೆ ಆಡಬೇಕೆಂದು ಕನಸು ಕಾಣುತ್ತಿದ್ದೆ. ಇಂದು ಆ ಕನಸು ನನಸಾಗಿದೆ' ಎಂದು ಗೆಲುವಿನ ಬಳಿಕ ಶಾಪೊವಾಲ್ವೊ ತಿಳಿಸಿದ್ದಾರೆ.