18 ವರ್ಷಗಳ ಬಳಿಕ ರಗ್ಬಿ ಆಡಿದ ಬ್ರೆಂಡನ್ ಮೆಕ್‌ಕಲಮ್

Brendon McCullum returns to the Rugby Field after 18 years
Highlights

ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್‌ಕಲಮ್ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೆ ಮೆಕ್‌ಕಲಮ್ ಅಷ್ಟೇ ಅದ್ಬುತ ರಗ್ಬಿ ಆಟಗಾರ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ನ್ಯೂಜಿಲೆಂಡ್(ಜೂನ್.3): ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್‌ಕಲಮ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ರಗ್ಬಿ ಕ್ರೀಡೆಯಲ್ಲೂ ಮಾಸ್ಟರ್. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಲೀಗ್ ಕ್ರಿಕೆಟ್ ಟೂರ್ನಿಗಳಲ್ಲಿ ಸಕ್ರೀಯವಾಗಿರೋ ಮೆಕ್‌ಕಲಮ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಬಿಡುವಿನ ವೇಳೆಯಲ್ಲಿ ಮೆಕ್‌ಕಲಮ್ ರಗ್ಬಿ ಆಡೋ ಮೂಲಕ ಗಮನಸೆಳೆದಿದ್ದಾರೆ.

18 ವರ್ಷಗಳ ಬಳಿಕ ಬ್ರೆಂಡನ್ ಮೆಕ್‌ಕಲಮ್ ಇದೀಗ ರಗ್ಬಿ ಆಡಿದ್ದಾರೆ. ಶಾಲಾ ದಿನಗಳಲ್ಲಿ ಅತ್ಯುತ್ತಮ ರಗ್ಬಿ ಪಟುವಾಗಿದ್ದ ಮೆಕ್‌ಕಲಮ್, ಇದೀಗ ನ್ಯೂಜಿಲೆಂಡ್‌ನ ಮತಾಮತ ಬಿ ತಂಡದ ಪರವಾಗಿ ರಗ್ಬಿ ಆಡಿದ್ದಾರೆ. ಗಾಯದ ನಡುವೆಯೂ ರಗ್ಬಿ ಪಂದ್ಯವಾಡಿದ ಮೆಕ್‌ಕಲಮ್ ತಂಡವನ್ನ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮೆಕ್‌ಕಲಮ್ ಸಂತಸ ಹಂಚಿಕೊಂಡಿದ್ದಾರೆ.

ಹೈಸ್ಕೂಲ್ ವಿದ್ಯಾಬ್ಯಾಸದ ವೇಳೆ ರಗ್ಬಿ ನನ್ನ ನೆಚ್ಚಿನ ಕ್ರೀಡೆಯಾಗಿತ್ತು ಎಂದು ಮೆಕ್‌ಕಲಮ್ ನ್ಯೂಜಿಲೆಂಡ್‌ನ ಖಾಸಗಿ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆಲ್-ಬ್ಲಾಕ್ಸ್ ತಂಡದ ಪರ ರಗ್ಬಿ ಆಡುತ್ತಿದ್ದೆ. ಇದೀಗ 18 ವರ್ಷಗಳ ಬಳಿಕ ಮತ್ತೆ ರಗ್ಬಿ ಆಡಿರೋದು ಖುಷಿ ತಂದಿದೆ ಎಂದು ಮೆಕ್‌ಕಲಮ್ ಹೇಳಿದ್ದಾರೆ.  

loader