ಬ್ರಾಡ್ ಹಾಡ್ಜ್ ಜೊತೆಗೆ ಮೂರು ವರ್ಷ ಒಪ್ಪಂದ ಮಾಡಿಕೊಂಡಿದ್ದು, ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ತಿಳಿಸಿದ್ದಾರೆ.

ನವದೆಹಲಿ(ಡಿ.14): ಕಿಂಗ್ಸ್ ಇಲೆವನ್ ಪಂಜಾಬ್ ತಂಡವು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಅವರನ್ನು ಮೂರು ವರ್ಷದ ಅವಧಿಗೆ ಮುಖ್ಯ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.

ಕಳೆದೆರಡು ವರ್ಷಗಳಿಂದ ಗುಜರಾತ್ ಲಯನ್ಸ್ ತಂಡದ ಕೋಚ್ ಆಗಿದ್ದ ಹಾಡ್ಜ್, ಇದೀಗ ತಂಡದ ಮೆಂಟರ್ ಹಾಗೂ ನಿರ್ದೇಶಕರಾದ ವೀರೇಂದ್ರ ಸೆಹ್ವಾಗ್‌'ಗೆ ವರದಿ ಮಾಡಿಕೊಳ್ಳಲಿದ್ದಾರೆ.

ಬ್ರಾಡ್ ಹಾಡ್ಜ್ ಜೊತೆಗೆ ಮೂರು ವರ್ಷ ಒಪ್ಪಂದ ಮಾಡಿಕೊಂಡಿದ್ದು, ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ತಿಳಿಸಿದ್ದಾರೆ.

2016ರ ಡಿಸೆಂಬರ್‌ನಲ್ಲಿ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ ರಾಜೀನಾಮೆ ನೀಡಿದ ಬಳಿಕ, ಸೆಹ್ವಾಗ್ ತಂಡದ ಕೋಚಿಂಗ್ ನಿರ್ವಹಣೆ ನೋಡಿಕೊಳ್ಳುತ್ತಿದ್ದರು.