ನವದೆಹಲಿ[ಜೂ.28]: ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ಜುಲೈ 13ರಂದು ಅಮೆರಿಕದಲ್ಲಿ ಮೊದಲ ಪಂದ್ಯವನ್ನು ಆಡಲಿದ್ದಾರೆ. 

ವಿಜೇಂದರ್‌ಗೆ ನನ್ನ ಕಂಡ್ರೆ ಭಯ ಎಂದ ಬಾಕ್ಸರ್‌ ಆಮೀರ್‌

ವೃತ್ತಿಪರ ಬಾಕ್ಸಿಂಗ್‌ನಲ್ಲಿ ಮಿಂಚುತ್ತಿರುವ ವಿಜೇಂದರ್ ತಮ್ಮ ಮೊದಲ ಪಂದ್ಯವನ್ನು ಸ್ಥಳೀಯ ಬಾಕ್ಸರ್ ಮೈಕ್ ಸ್ನೈಡರ್ ವಿರುದ್ಧ ಆಡಲಿದ್ದಾರೆ. ಪಂದ್ಯ ನ್ಯೂಜೆರ್ಸಿಯ ನೆವಾರ್ಕ್ ನಗರದಲ್ಲಿ ನಡೆಯಲಿದೆ. 8 ಸುತ್ತುಗಳ ಪಂದ್ಯ ಇದಾಗಿರಲಿದೆ ಎಂದು ವಿಜೇಂದರ್ ತಂಡದ ಸದಸ್ಯರು ತಿಳಿಸಿದ್ದಾರೆ. ವೃತ್ತಿಪರ ಬಾಕ್ಸಿಂಗ್‌ನಲ್ಲಿ 10 ಪಂದ್ಯಗಳನ್ನು ಆಡಿರುವ ವಿಜೇಂದರ್ ಅಜೇಯವಾಗಿ ಉಳಿದಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ್ದ ವಿಜೇಂದರ್ ಸಿಂಗ್, ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಎದುರು ಮುಖಭಂಗ ಅನುಭವಿಸಿದ್ದರು.