‘‘ಸ್ಪಿನ್ ಬೌಲಿಂಗ್‌ನಲ್ಲಿ ಯಶಸ್ಸು ಸಾಸಬೇಕೆಂದರೆ ಮೊದಲು ಮನಸ್ಸನ್ನು ನಿಶ್ಚಲವಾಗಿಟ್ಟುಕೊಂಡಿರಬೇಕು. ಕ್ಷಮತೆಯೊಂದಿಗೆ ಸದಾ ಎಚ್ಚರಿಕೆಯಿಂದಿರಬೇಕು. ವಿಕೆಟ್ ಗಳಿಸುವ ದಾಹ ಹಾಗೂ ಎದುರಾಳಿ ಬ್ಯಾಟ್ಸ್‌ಮನ್‌ಗಳ ಬಲ, ದೌರ್ಬಲ್ಯಗಳನ್ನು ಅರಿಯುವಂಥ ಜಾಣ್ಮೆಯನ್ನು ಹೊಂದಿರಬೇಕು"- ಹರ್ಭಜನ್ ಸಿಂಗ್ 

ನವದೆಹಲಿ(ನ.11): ಸ್ಪಿನ್ ಬೌಲಿಂಗ್ ಕೇವಲ ಕೈಚಳಕ್ಕೆ ಸಂಬಂಸಿದ ವಿಚಾರವಲ್ಲ, ಅದು ಮಾನಸಿಕ ಸದೃಢತೆಗೆ ಸಂಬಂಧಪಟ್ಟ ವಿಚಾರವೂ ಆಗಿದೆ ಎಂದು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಸ್ಪಿನ್ ಬೌಲಿಂಗ್‌ನಲ್ಲಿ ಯಶಸ್ಸು ಸಾಸಬೇಕೆಂದರೆ ಮೊದಲು ಮನಸ್ಸನ್ನು ನಿಶ್ಚಲವಾಗಿಟ್ಟುಕೊಂಡಿರಬೇಕು. ಕ್ಷಮತೆಯೊಂದಿಗೆ ಸದಾ ಎಚ್ಚರಿಕೆಯಿಂದಿರಬೇಕು. ವಿಕೆಟ್ ಗಳಿಸುವ ದಾಹ ಹಾಗೂ ಎದುರಾಳಿ ಬ್ಯಾಟ್ಸ್‌ಮನ್‌ಗಳ ಬಲ, ದೌರ್ಬಲ್ಯಗಳನ್ನು ಅರಿಯುವಂಥ ಜಾಣ್ಮೆಯನ್ನು ಹೊಂದಿರಬೇಕು. ಅಲ್ಲದೆ, ತಂತ್ರಗಾರಿಕೆಯನ್ನು ಬದಲಿಸುವ ಛಾತಿಯಿರಬೇಕು’’ ಎಂದು ಅವರು ತಿಳಿಸಿದ್ದಾರೆ.

ಕಳೆದ ಐಪಿಎಲ್ ನಂತರ ಕ್ರಿಕೆಟ್'ನಿಂದ ದೂರ ಉಳಿದಿರುವ ಭಜ್ಜಿ ಸಧ್ಯ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ತಯಾರಿ ನಡೆಸಿಲ್ಲ ಎಂದಿರುವ ಅವರು, ಮುಂದಿನ ರಣಜಿ ಟ್ರೋಫಿಯಲ್ಲಿ ಪಂಜಾಬ್ ತಂಡದ ಪರ ಕಣಕ್ಕಿಳಿಯಲಿದ್ದೇನೆ ಎಂದು 417 ಟೆಸ್ಟ್ ವಿಕೆಟ್ ಪಡೆದಿರುವ ಭಜ್ಜಿ ಹೇಳಿದ್ದಾರೆ.