Asianet Suvarna News Asianet Suvarna News

ಬಯಲಾಯ್ತು ಟೀಂ ಇಂಡಿಯಾದ ಹಿಟ್'ಮ್ಯಾನ್ ಬಿಗ್ ಸೀಕ್ರೆಟ್

ಮೊನ್ನೆಯ ನ್ಯೂಜಿಲೆಂಡ್​​​ ವಿರುದ್ಧದ ಸೋಲು ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿದ್ರೂ ಪುಟಿದೇಳೋ ಕನಸು ಕಾಣ್ತಿದೆ. ಆದ್ರೆ ಮೊನ್ನೆಯ ಮ್ಯಾಚ್​​ನಿಂದ ನಾಯಕ ವಿರಾಟ್​​​ ಕೊಹ್ಲಿ ಮತ್ತು ಭಾರತದ ಕ್ರಿಕೆಟ್​​​​ ಪ್ರೇಮಿಗಳಿಗೆ ಕಾಡ್ತಿದ್ದ ಕೆಲ ಡೌಟ್​​ಗಳು ನಿವಾರಣೆಯಾಗಿದೆ. ಹಾಗಾದ್ರೆ ಯಾವೆಲ್ಲಾ ಡೌಟ್​​ಗಳಿಗೆ ಮೊದಲ ಮ್ಯಾಚ್​​ ಉತ್ತರ ನೀಡಿದೆ? ಇಲ್ಲಿದೆ ಉತ್ತರ

Biggest Secret Of Rohith Sharma Has Been Revealed

ನ್ಯೂಜಿಲೆಂಡ್​​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಹುಡುಗರ ಕೆಲ ಎಡವಟ್ಟುಗಳು ಭಾರತದ ಕ್ರಿಕೆಟ್​​ ಪ್ರೇಮಿಗಳನ್ನ ಬೇಸರದ ಕಡಲಿಗೆ ತಳ್ಳಿ ಬಿಟ್ಟಿತ್ತು. ಫೇವರೇಟ್ಸ್​​​ ಎನ್ನಿಸಿಕೊಂಡಿದ್ದ ಟೀಂ ಇಂಡಿಯಾ ಮಕಾಡೆ ಮಲಗಿಬಿಡ್ತು. ಇದೊಂದು ಸೋಲು ಈಗ ಕೊಹ್ಲಿ ಆಂಡ್​​ ಟೀಂ ಅನ್ನ ವಿಲನ್​'ಗಳನ್ನಾಗಿಸಿಬಿಡ್ತು. ಆದ್ರೆ ಮೊನ್ನೆಯ ಪಂದ್ಯದಿಂದ ಟೀಂ ಇಂಡಿಯಾ ನಾಯಕ ಕೊಹ್ಲಿ ಮತ್ತು ಅಭಿಮಾನಿಗಳಿಗೆ ಕಾಡ್ತಿದ್ದ ಕೆಲ ಡೌಟ್​'​ಗಳಿಗೆ ತೆರೆಬಿತ್ತು. ಕೆಲವು ಟೀಂ ಇಂಡಿಯಾ ವೀಕ್'​​ನೆಸ್'​​​ಗಳು ಬಹಿರಂಗವಾಯ್ತು.

ಟೀಂ ಇಂಡಿಯಾದ ಹಿಟ್​​​ನ್ಯಾನ್​ ಸೀಕ್ರೆಟ್​​ ರಿವೀಲ್​​​

ಲೆಫ್ಟ್​​ ಆರ್ಮ್​ ಫಾಸ್ಟ್​​ ಬೌಲರ್ಸ್​​ ಅಂದ್ರೆ ಟೀಂ ಇಂಡಿಯಾ ಗಢಗಢ ನಡಗುತ್ತೆ ಅನ್ನೋದು ಹಳೆಯ ವಿಷ್ಯ. ಆದ್ರೆ ಇಡೀ ಟೀಂ ಇಂಡಿಯಾದಲ್ಲಿ ಲೆಫ್ಟಿಗಳಿಗೆ ಹೆಚ್ಚು ಹೆದರೋದು ಯಾರು ಅನ್ನೋದು ಗೊತ್ತಿರಲ್ಲಿಲ್ಲ ಈಗ ಅದಕ್ಕೆ ಉತ್ತರ ಸಿಕ್ಕಿದೆ. ಟೀಂ ಇಂಡಿಯಾದ ಹಿಟ್​​'ಮ್ಯಾನ್​ ಅಂತ ಕರೆಯಿಸಿಕೊಂಡು ಶ್ರೇಷ್ಠ ಬ್ಯಾಟ್ಸ್​ಮನ್​ ಎಂದೆನಿಸಿರೋ ಆರಂಭಿಕ ಬ್ಯಾಟ್ಸ್​​'ಮನ್​ ರೋಹಿತ್​ ಶರ್ಮಾ.

ರೋಹಿತ್​​ ಕೇವಲ ನಿನ್ನೆ ಮಾತ್ರ ಎಡಗೈ ವೇಗಿ ಟ್ರೆಂಟ್​​ ಬೋಲ್ಟ್​​'ಗೆ ಔಟಾಗಿಲ್ಲ, ಎರಡು ವಾರದ ಹಿಂದೆಯಷ್ಟೇ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಎಡಗೈ ವೇಗಿಗೆ ಔಟಾಗಿದ್ರು. ಅದಕ್ಕೂ ಮುನ್ನ ಚಾಂಪಿಯನ್ಸ್​​ ಟ್ರೋಫಿಯಲ್ಲಿ ಮೊಹಮ್ಮದ್​​ ಆಮಿರ್​​​ ಎದುರು ತಲೆಬಗ್ಗಿಸಿ ನಿಂತಿದ್ರು. ಈ ವಿಷ್ಯ ಈಗ ಕನ್​ಫರ್ಮ್​ ಆಗಿದ್ದು ಶರ್ಮಾನ ಬಿಗ್​ ಸೀಕ್ರೆಟ್​​ ರಿವೀಲ್​ ಆಯ್ತು.

4ನೇ ಕ್ರಮಾಂಕಕ್ಕೆ ಜಾಧವ್​​ ಲಾಯಕ್ಕಿಲ್ಲ: ಶುರುವಾಯ್ತು ಕೇದರ್​​ನ ಕೌಂಟ್​​ ಡೌನ್​​

ಟೀಂ ಇಂಡಿಯಾಗೆ ಕಳೆದ 2 ವರ್ಷದಿಂದ ಕಾಡುತ್ತಿರುವ 4ನೇ ಕ್ರಮಾಂಕದ ಸಮಸ್ಯೆಗೆ ಇಂದಿಗೂ ಉತ್ತರ ಸಿಗ್ತಿಲ್ಲ. ಟೀಂ ಮ್ಯಾನೇಜ್​​​'ಮೆಂಟ್​​ ಅಂತೂ ಮಾಡಿಬಹುದ್ದಾದ್ದುದನೆಲ್ಲಾ ಮಾಡಿ ಆಗಿದೆ. ಆದ್ರೆ ಲಾಸ್ಟ್​​ ಆಪ್ಷನ್​​​ ಅಂತಿದ್ದ ಜಾಧವ್​​​'ರನ್ನೂ ಕೂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮತ್ತು ನಿನ್ನೆ ಸೇರಿ ಎರಡು ಬಾರಿ 4 ನೇ ಕ್ರಮಾಂಕಕ್ಕೆ ಬಡ್ತಿ ನೀಡ್ತು. ಆದ್ರೆ ಜಾಧವ್​ ಕೂಡ ಫ್ಲಾಪ್​ ಆದ್ರು. 4ನೇ ಕ್ರಮಾಂಕಕ್ಕೆ ಅವರು ಸೂಕ್ತರಲ್ಲ ಎನ್ನುವುದು ಖಚಿತವಾಗಿದೆ.

ಇದೊಂದೇ ಅಲ್ಲ ಜಾಧವ್​'ರ ಕೌಂಟ್​​ ಡೌನ್​ ಸ್ಟಾರ್ಟ್​ ಆಗಿದೆ. ಕಾರಣ ಕಳೆದ 15 ಏಕದಿನ ಪಂದ್ಯಗಳಲ್ಲಿ ಜಾಧವ್​ ಗಳಿಸಿರೋದು ಕೇವಲ 2 ಅರ್ಧಶತಕ. ಅಷ್ಟೇ ಅಲ್ಲ ಅಗತ್ಯವಿರುವ ಸಂಧರ್ಭದಲ್ಲಿ ಜಾಧವ್​ ತಂಡಕ್ಕೆ ಕೈ ಕೊಡ್ತಾನೆ ಇದ್ದಾರೆ. ಇದು ಅವರ ಕೊನೆಗಾಲಕ್ಕೆ ನಾಂದಿಯಾಗಿದೆ ಅನ್ನೋದು ಈಗ ಸ್ಪಷ್ಠವಾಗಿದೆ.

ಭುವಿ ಈಗ ಬೌಲಿಂಗ್​ ಆಲ್'​ರೌಂಡರ್​​​

ಮೊನ್ನೆಯ ನ್ಯೂಜಿಲೆಂಡ್​​ ವಿರುದ್ಧದ ಪಂದ್ಯ ಟೀಂ ಇಂಡಿಯಾದ ಭುವನೇಶ್ವರ್​​ ಕೂಮಾರ್'​​ಗೆ ಬೌಲಿಂಗ್​ ಆಲ್'​ರೌಂಡರ್​​​ ಎನ್ನುವ ಪಟ್ಟ ತಂದುಕೊಡ್ತು. ಶ್ರೀಲಂಕಾ ಮತ್ತು ಆಸೀಸ್​​ ಸರಣಿಯಲ್ಲಿ ಭುವಿ ಬ್ಯಾಟಿಂಗ್​ನಲ್ಲಿ ಗಮನ ಸೆಳದಿದ್ರೂ ಕೇವಲ 2 ಸರಣಿಯಿಂದ ಅವರ ಡೆಸಿಗನೇಷನ್​​ ಚೇಂಜ್​ ಮಾಡೋದು ಅಸಮಂಜಸ. ಆದ್ರೆ ಯಾವಾಗ ನ್ಯೂಜಿಲೆಂಡ್​​ ವಿರುದ್ಧ ಭುವಿ ಕೊನೆಯ ಘಳಿಗೆಯಲ್ಲಿ ಅಬ್ಬರಿಸಿದ್ರೋ ಅವರು ಹಾರ್ದಿಕ್​ ಪಾಂಡ್ಯನ ಜೊತೆ ಆಲ್​ರೌಂಡರ್​​ ಲಿಸ್ಟ್​​ಗೆ ಸೇರ್ಪಡೆಯಾಗಿದ್ದಾರೆ.

ಟೀಂ ಇಂಡಿಯಾಗೆ ಈಗಲೂ ಧೋನಿಯೇ ನಾಯಕ

ನ್ಯೂಜಿಲೆಂಡ್​​ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಯಾರು ಅಂದ್ರೆ ಥಟ್​​ ಅಂತ ವಿರಾಟ್​​ ಕೊಹ್ಲಿ ಅಂತ ಹೇಳಿ ಬಳಿಕ ಧೋನಿ ಅವರಿಗೆ ಸಪೋರ್ಟ್​ ಮಾಡ್ತಾರೆ ಅಷ್ಟೇ ಅಂತಿದ್ರು. ಆದ್ರೆ ಮೊನ್ನೆಯ ಪಂದ್ಯದ ನಂತರ ಎಲ್ರೂ ಈಗಲೂ ಧೋನಿಯೇ ನಾಯಕ ಅಂತಿದ್ದಾರೆ. ಪ್ರತೀ ಡಿಸಿಷೆನ್​ ತಗೆದುಕೊಳ್ಳಬೇಕಾದ್ರೂ ನಾಯಕನೆನಿಸಿರೋ ಕೊಹ್ಲಿ ನೋಡೋದು ಮಹಿ ಮುಖವನ್ನ. ಅವರು ಹು ಅಂದ್ರೆ ಕೊಹ್ಲಿಯೂ ಹು ಅಂತಾರೆ. ಒಟ್ಟಾರೆಯಾಗಿ ಹೇಳಬೇಕಂದ್ರೆ ನ್ಯೂಜಿಲೆಂಡ್​​ ವಿರುದ್ಧದ ಪಂದ್ಯದಲ್ಲಿ ಮಹಿ ಈಗಲೂ ಟೀಂ ಇಂಡಿಯಾವನ್ನ ಕಂಟ್ರೋಲ್​ ಮಾಡುತ್ತಿರೋದು ಸ್ಪಷ್ಟವಾಯ್ತ.

ಒಟ್ಟಿನಲ್ಲಿ ಒಂದೇ ಒಂದು ಮ್ಯಾಚ್​​​ ಟೀಂ ಇಂಡಿಯಾವನ್ನ ಬೆತ್ತಲೆ ಮಾಡಿದೆ. ಯಾರ ಸ್ಟ್ರೆಂಥ್​​ ಎಷ್ಟು, ಯಾರು ತಂಡದಲ್ಲಿರಲು ನಾಲಾಯಕ್ಕು ಅನ್ನೋದೆಲ್ಲಾ ಒಂದು ಸೋಲು ಬಹಿರಂಗ ಪಡಿಸಿದೆ, ಒಂದೇ ಸೋಲಿಗೆ ಇಷ್ಟೆಲ್ಲಾ ಸತ್ಯಗಳು ಹೊರಬಂದ್ರೆ ಇನ್ನೇನಾದ್ರೂ ಸರಣಿ ಸೋತುಬಿಟ್ರೆ ದೇವರೇ​ ಗತಿ.

Follow Us:
Download App:
  • android
  • ios