ನ.26ರಂದು ಬುಲಂದ್‌ಶಹರ್‌ನಲ್ಲಿ ಹಾಗೂ 30ರಂದು ದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ

ನವದೆಹಲಿ(ನ.12): ವೇಗಿ ಭುವನೇಶ್ವರ್ ಕುಮಾರ್ ನ.23ರಂದು ನೂಪುರ್ ನಗರ್‌ರನ್ನು ವರಿಸಲಿದ್ದಾರೆ. ಇವರಿಬ್ಬರ ವಿವಾಹ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆಯಲಿದ್ದು, ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಆಪ್ತರು ಪಾಲ್ಗೊಳ್ಳಲಿದ್ದಾರೆ.

ನ.26ರಂದು ಬುಲಂದ್‌ಶಹರ್‌ನಲ್ಲಿ ಹಾಗೂ 30ರಂದು ದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ ಎಂದು ಭುವನೇಶ್ವರ್ ತಂದೆ ಕಿರಣ್ ಪಾಲ್ ಸಿಂಗ್ ತಿಳಿಸಿದ್ದಾರೆ. ಭುವನೇಶ್ವರ್ ಹಾಗೂ ನೂಪುರ್‌ರ ವಿವಾಹ ನಿಶ್ಚಿತಾರ್ಥ ಕಳೆದ ತಿಂಗಳು ನೆರವೇರಿತ್ತು.

2ನೇ ಟೆಸ್ಟ್ಗೆ ಅಲಭ್ಯ?

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ನ.16ರಿಂದ ಆರಂಭಗೊಳ್ಳಲಿದ್ದು, 2ನೇ ಟೆಸ್ಟ್ಗೆ ನ.24ರಿಂದ ಚಾಲನೆ ಸಿಗಲಿದೆ. ಈ ಸರಣಿಗೆ ಟೀಂ ಇಂಡಿಯಾದಲ್ಲಿ ಭುವನೇಶ್ವರ್ ಸ್ಥಾನ ಪಡೆದಿದ್ದು, ಮದುವೆ ಹಿನ್ನೆಲೆಯಲ್ಲಿ 2ನೇ ಟೆಸ್ಟ್ಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ.