ಗುಂಪು ಹಂತಕ್ಕೇರಲು ರೆಡಿಯಾದ BFC

First Published 20, Feb 2018, 1:24 PM IST
BFC will go all out to to seal the deal
Highlights

ಮಾಲೆಯಲ್ಲಿ ನಡೆದಿದ್ದ ಪಂದ್ಯವನ್ನು 3-2 ಗೋಲುಗಳಿಂದ ಗೆದ್ದಿದ್ದ ಬಿಎಫ್‌ಸಿ ಇಂದಿನ ಪಂದ್ಯವನ್ನು ಗೆದ್ದು ಎಎಫ್‌'ಸಿ ಕಪ್ ಗುಂಪು ಹಂತಕ್ಕೆ ಪ್ರವೇಶಿಸಲು ಎದುರು ನೋಡುತ್ತಿದೆ. ಒಂದೊಮ್ಮೆ ಪಂದ್ಯವನ್ನು 1-2 ಗೋಲುಗಳ ಅಂತರದಲ್ಲಿ ಸೋತರೂ, ಬಿಎಫ್‌'ಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ.

ಬೆಂಗಳೂರು(ಫೆ.20): ಇಂಡಿಯನ್ ಸೂಪರ್ ಲೀಗ್ ಅಭಿಯಾನದ ಜತೆಯಲ್ಲೇ ಎಎಫ್‌ಸಿ ಕಪ್ ಪ್ರಯಾಣವನ್ನೂ ನಡೆಸುತ್ತಿರುವ ಬೆಂಗಳೂರು ಎಫ್‌ಸಿ, ಮಂಗಳವಾರ ಎಎಫ್‌ಸಿ ಕಪ್ ಪ್ಲೇ-ಆಫ್ ಹಂತದ 2ನೇ ಚರಣದ ಪಂದ್ಯದಲ್ಲಿ ಮಾಲ್ಡೀವ್ಸ್'ನ ಟಿಸಿ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಎದುರಿಸಲಿದೆ.

ಕಳೆದ ವಾರ ಮಾಲೆಯಲ್ಲಿ ನಡೆದಿದ್ದ ಪಂದ್ಯವನ್ನು 3-2 ಗೋಲುಗಳಿಂದ ಗೆದ್ದಿದ್ದ ಬಿಎಫ್‌ಸಿ ಇಂದಿನ ಪಂದ್ಯವನ್ನು ಗೆದ್ದು ಎಎಫ್‌'ಸಿ ಕಪ್ ಗುಂಪು ಹಂತಕ್ಕೆ ಪ್ರವೇಶಿಸಲು ಎದುರು ನೋಡುತ್ತಿದೆ. ಒಂದೊಮ್ಮೆ ಪಂದ್ಯವನ್ನು 1-2 ಗೋಲುಗಳ ಅಂತರದಲ್ಲಿ ಸೋತರೂ, ಬಿಎಫ್‌'ಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ.

ಎಎಫ್‌'ಸಿ ಕಪ್‌'ನ ನಿಯಮದನುಸಾರ, 2 ಚರಣಗಳ ಮುಕ್ತಾಯಕ್ಕೆ ಅತಿಹೆಚ್ಚು ಗೋಲು ಬಾರಿಸಿದ ತಂಡ ಗೆಲುವು ಸಾಧಿಸಲಿದೆ. ಮೊದಲ ಚರಣದಲ್ಲಿ ಬಿಎಫ್‌'ಸಿ 3 ಹಾಗೂ ಟಿಸಿ ಸ್ಪೋರ್ಟ್ಸ್ ಕ್ಲಬ್ 2 ಗೋಲು ಗಳಿಸಿದ್ದವು. 2ನೇ ಚರಣದ ಪಂದ್ಯದಲ್ಲಿ ಬಿಎಫ್‌ಸಿ 1 ಗೋಲು ಗಳಿಸಿ, ಮಾಲ್ಡೀವ್ಸ್ ತಂಡ 2 ಗೋಲು ಗಳಿಸಿದರೆ, ಉಭಯ ತಂಡಗಳು ತಲಾ 4 ಗೋಲುಗಳಲ್ಲಿ ಸಮಬಲ ಸಾಧಿಸಲಿವೆ.

ಹೀಗಾದಲ್ಲಿ, ತವರಿನಾಚೆ ಅತಿಹೆಚ್ಚು ಗೋಲು ಗಳಿಸಿದ ತಂಡ, ವಿಜೇತ ತಂಡವಾಗಿ ಹೊರಹೊಮ್ಮಲಿದೆ. ಲೆಕ್ಕಾಚಾರಗಳು ಏನೇ ಇದ್ದರೂ, ತನ್ನ ಭದ್ರಕೋಟೆ ಕಂಠೀರವ ಕ್ರೀಡಾಂಗಣದಲ್ಲಿ ಗೆಲುವಿನ ಓಟ ಮುಂದುವರಿಸಲು ಬಿಎಫ್‌'ಸಿ ಎದುರು ನೋಡುತ್ತಿದೆ. ಮೊದಲ ಚರಣದ ಪಂದ್ಯದಲ್ಲಿ ಬಿಎಫ್‌'ಸಿ ತನ್ನ ಪ್ರಮುಖ ಆಟಗಾರರಿಲ್ಲದೇ ಕಣಕ್ಕಿಳಿದಿತ್ತು. ಆದರೂ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮಂಗಳವಾರವೂ ದ್ವಿತೀಯ ದರ್ಜೆ ತಂಡ ಕಣಕ್ಕಿಳಿದರೆ ಅಚ್ಚರಿಯಿಲ್ಲ.

loader